ನಟಿ ಭಾವನಾ ರಾಮಣ್ಣ ಅವರ ಸೀಮಂತ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ. ಭಾವನ ಏಳು ತಿಂಗಳ ಗರ್ಭಿಣಿಯಾಗಿದ್ದು, ಸೀಮಂತ ಶಾಸ್ತ್ರ ದಾವಣಗೆರೆಯ ತಮ್ಮ ನಿವಾಸದಲ್ಲಿ ನಡೆದಿದೆ..

ಸೀಮಂತ ಶಾಸ್ತ್ರಕ್ಕೆ ಆಪ್ತರನ್ನಷ್ಟೇ ಆಹ್ವಾನಿಸಿದ್ದರು..ಮದುವೆಯಾಗದೇ ಭಾವನಾ ಐಬಿಎಫ್ ಮೂಲಕ ಗರ್ಭಿಣಿಯಾಗಿದ್ದು, ಅವಳಿ ಮಕ್ಕಳಿಗೆ ಶೀಘ್ರದಲ್ಲೇ ಜನ್ಮ ನೀಡಲಿದ್ದಾರೆ. ಸೀಮಂತಕ್ಕೆ ಭಾವನಾ ಹಸಿರು ಬಣ್ಣದ ಸೀರೆಯನ್ನ ಧರಿಸಿದ್ದು, ಸೀಮಂತ ಶಾಸ್ತ್ರ ಸರಳವಾಗಿ ನಡೆದರೂ ಸಂಪ್ರದಾಯದ ಪ್ರಕಾರ ನಡೆದಿದೆ..


