Thursday, November 20, 2025
19.5 C
Bengaluru
Google search engine
LIVE
ಮನೆಮನರಂಜನೆ ಸಿಹಿ ಸುದ್ದಿ ನೀಡಿದ ನಟಿ ಅದಿತಿ ಪ್ರಭುದೇವ : 2024 ನಾನು ಅಮ್ಮನಾಗುವೆ

 ಸಿಹಿ ಸುದ್ದಿ ನೀಡಿದ ನಟಿ ಅದಿತಿ ಪ್ರಭುದೇವ : 2024 ನಾನು ಅಮ್ಮನಾಗುವೆ

ಬೆಂಗಳೂರು : 2022ರ ನವೆಂಬರ್ 28ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್​ನ ಗಾಯತ್ರಿ ವಿಹಾರ ಗ್ರ್ಯಾಂಡ್​ನಲ್ಲಿ ಅದ್ದೂರಿಯಾಗಿ ಇವರ ವಿವಾಹ ನೆರವೇರಿತ್ತು. ಈಗ ಅದಿತಿ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ.

ನಟಿ ಅದಿತಿ ಪ್ರಭುದೇವ ಅವರು 2022ರ ನವೆಂಬರ್ ತಿಂಗಳಲ್ಲಿ ಮದುವೆ ಆಗಿದ್ದರು. ಯಶಸ್ ಜೊತೆ ಅವರ ವಿವಾಹ ನೆರವೇರಿತ್ತು. ಈಗ ಅವರು ಗುಡ್ ನ್ಯೂಸ್ ನೀಡಿದ್ದಾರೆ. ಫೋಟೋ ಹಂಚಿಕೊಂಡು ಅವರು ಸಂಭ್ರಮಿಸಿದ್ದಾರೆ.

2022ರ ನವೆಂಬರ್ 28ರಂದು ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ಸ್​ನ ವಿಹಾರ ಅದ್ದೂರಿಯಾಗಿ ಇವರ ವಿವಾಹ ನೆರವೇರಿತ್ತು. ಈಗ ಅದಿತಿ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ.

ಸಂಬಂದಗಳಲ್ಲಿ ಶ್ರೇಷ್ಠವಾದದ್ದು ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ ಅಮ್ಮ ಎಂದು ಪೋಸ್ಟ್ ಆರಂಭಿಸಿದ್ದಾರೆ ನಟಿ ಅದಿತಿ ಪ್ರಭುದೇವ.

ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ ಅಮ್ಮ . ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ ಅಮ್ಮ 2024ಕ್ಕೆ ನಾನು ಅಮ್ಮನಾಗುವೆ ಎಂದು ಪೋಸ್ಟ್ ಹಾಕಿದ್ದಾರೆ.

ಅದಿತಿ ಪ್ರಭುದೇವ ಅವರು ಚಿತ್ರರಂಗದಲ್ಲಿ ಯಶಸ್ಸಿನ ಮೆಟ್ಟಿಲು ಏರುತ್ತಿದ್ದಾರೆ. ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಇದರ ಜೊತೆಗೆ ತಾಯಿ ಆಗುತ್ತಿದ್ದಾರೆ.

ಜನವರಿ 26ರಂದು ಅದಿತಿ ಪ್ರಭುದೇವ ನಟನೆಯ ಅಲೆಕ್ಸಾ ಸಿನಿಮಾ ರಿಲೀಸ್ ಆಗುತ್ತಿದೆ. ಈ ಮಧ್ಯೆ ಅವರು ಮತ್ತೊಂದು ಖುಷಿ ಸುದ್ದಿ ನೀಡಿದ್ದಾರೆ. ಅವರಿಗೆ ಫ್ಯಾನ್ಸ್ ಶುಭಾಷಯ ತಿಳಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments