ಮಂಗಳೂರು: ನಟ ಯಶ್ ಅವರು ಬೆಳ್ತಂಗಡಿ ತಾಲೂಕಿನಲ್ಲಿರುವ ಉಜಿರೆಯ ಸೂರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಇಂದು ಬೆಳಗ್ಗೆ ನಟಿ ರಾಧಿಕಾ, ಮಕ್ಕಳ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಈ ವೇಳೆ ಕುಟುಂಬದ ಮಣ್ಣಿನ ಮೂರ್ತಿ ಮತ್ತು ಮಣ್ಣಿನ ಫಿಲ್ಮ್ ರೀಲ್ ಹರಕೆಯನ್ನು ಯಶ್ ತೀರಿಸಿದರು. ಈ ಭೇಟಿಯ ವೇಳೆ ಟಾಕ್ಸಿಕ್ ಚಲನಚಿತ್ರದ ನಿರ್ಮಾಪಕ ವೆಂಕಟ್ ಅವರು ಸಾಥ್ ನೀಡಿದರು. ಸುರ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಯಶ್ ಅವರು ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.