ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಭಟ್ಕಳ ಚಿತ್ರಾಪುರ ಮಠಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ದಂಪತಿಯ ಫೋಟೊವೊಂದು ವೈರಲ್ ಆಗಿದೆ.
ಯಶ್, ಮಗಳು ಐರಾ ಹಾಗೂ ರಾಧಿಕಾ ತಂದೆ ಕಿರಾಣಿ ಅಂಗಡಿಗೆ ಭೇಟಿ ಕೊಟ್ಟಿದ್ದು. ಫೋಟೊದಲ್ಲಿ ಮಗಳು ಐರಾಗೆ ಯಶ್ ಏನೋ ತಿನಿಸು ಕೊಡಿಸುತ್ತಿದ್ದಾರೆ. ಇನ್ನು ರಾಧಿಕಾ ಪಂಡಿತ್ ಸಾಮಾನ್ಯರಂತೆ ಕಟ್ಟೆ ಮೇಲೆ ಕೂತಿದ್ದಾರೆ. ಬ್ರ್ಯಾಂಡ್ ವಸ್ತುಗಳನ್ನು ಖರೀದಿಸುವ ರಾಕಿಂಗ್ ದಂಪತಿ ಸಾಮಾನ್ಯರಂತೆ ಕಿರಾಣಿ ಅಂಗಡಿಯಲ್ಲಿ ಖರೀದಿಸುತ್ತಿರುವ ಫೋಟೊ ಕಂಡು ಫ್ಯಾನ್ಸ್ ಹಾಡಿ ಹೊಗಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಸರಳತೆಗೆ ಫಿಧಾ ಆಗಿದ್ದಾರೆ.