Wednesday, January 28, 2026
18.8 C
Bengaluru
Google search engine
LIVE
ಮನೆ#Exclusive NewsTop Newsಮೈಕ್ ಹಿಡಿದು ನಡುಗುತ್ತಲೇ ಟ್ರೋಲಿಗರಿಗೆ ಸಖತ್‌ ಟಾಂಗ್‌ ಕೊಟ್ಟ ವಿಶಾಲ್‌!

ಮೈಕ್ ಹಿಡಿದು ನಡುಗುತ್ತಲೇ ಟ್ರೋಲಿಗರಿಗೆ ಸಖತ್‌ ಟಾಂಗ್‌ ಕೊಟ್ಟ ವಿಶಾಲ್‌!

ತಮಿಳಿನ ನಟ ವಿಶಾಲ್ ಅವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಕೈ ನಡುಗುತ್ತಿರುವ ಸ್ಥಿತಿ ಕಂಡು  ಫ್ಯಾನ್ಸ್‌ ಆತಂಕ ವ್ಯಕ್ತಪಡಿಸಿದ್ದರು. ಅನಾರೋಗ್ಯದ ವಿಡಿಯೋ ನೋಡಿ ಅನೇಕರು ಕಾಲೆಳೆದಿದ್ದರು. ಈಗ ವಿಶಾಲ್ ಗುಣಮುಖರಾಗಿದ್ದಾರೆ. ಹಾಗಾಗಿ ಸಿನಿಮಾದ ಸಮಾರಂಭವೊಂದರಲ್ಲಿ ತಮ್ಮನ್ನು ಟ್ರೋಲ್ ಮಾಡಿದವರಿಗೆ ಸಖತ್ ಆಗಿ ಟಾಂಗ್ ಕೊಟ್ಟಿದ್ದಾರೆ.
ವಿಶಾಲ್ ನಟನೆಯ 12 ವರ್ಷ ಹಳೆಯ ಸಿನಿಮಾ ಈಗ ಬಿಡುಗಡೆ ಆಗಿದ್ದು, ಸಿನಿಮಾ ಯಶಸ್ಸು ಗಳಿಸಿದೆ. ಕೆಲವೇ ದಿನಗಳಲ್ಲಿ 50 ಕೋಟಿ ಕಲೆಕ್ಷನ್‌ನತ್ತ ಸಾಗಿದೆ. ಹೀಗಾಗಿ ಪತ್ರಿಕಾ ಘೋಷ್ಟಿಯಲ್ಲಿ ನಟ ತಮ್ಮ ಆರೋಗ್ಯದ ಕುರಿತಾದ ಇತ್ತೀಚಿನ ವದಂತಿಗಳಿಗೆ ಸ್ಪಷ್ಟನೆ ನೀಡಿದರು.
ಮೈಕ್ ಕೈಗೆ ಎತ್ತಿಕೊಳ್ಳುತ್ತಲೇ ಅವರ ಕೈ ನಡುಗಲು ಪ್ರಾರಂಭವಾಯ್ತು.ಹಾಗೇ ನಟ ಕೈ ನಡುಗುವುದು ನಿಲ್ಲುತ್ತಲೇ ಇಲ್ಲ ಎಂದರು. ಈ ವಿಡಿಯೋ ಮತ್ತೆ ಯುಟ್ಯೂಬ್‌ನಲ್ಲಿ ವೈರಲ್‌ ಆಗಲ್ಲಾ ಅಲ್ವಾ? ಎಂದು ವೇದಿಕೆ ಮೇಲೆ ಹೇಳಿದ್ದಾರೆ. ಬಳಿಕ ಇದು ಜೋಕ್‌ ಎಂದರು. ಅಸಲಿಗೆ ವಿಶಾಲ್ ಕೈ ನಡುಗುತ್ತಿರಲಿಲ್ಲ ಬದಲಿಗೆ ಅವರೇ ಬೇಕೆಂದು ತಮಾಷೆಗೆ ಹಾಗೆ ಮಾಡಿದರು. ಈ ಮೂಲಕ ತಮ್ಮ ಬಗ್ಗೆ ಟ್ರೋಲ್‌ ಮಾಡಿದವರಿಗೆ ಟಾಂಗ್‌ ಕೊಟ್ಟಿದ್ದಾರೆ.

ಆರೋಗ್ಯದ ಕುರಿತು ನಟ ಮಾಹಿತಿ ನೀಡಿದ್ದೇನು?

ಇದರ ಜೊತೆಗೆ ಆರೋಗ್ಯದ ಬಗ್ಗೆ ಸ್ಪಷ್ಟನೆ ಕೂಡ ಕೊಟ್ಟರು. “ನನಗೆ ಇತ್ತೀಚೆಗೆ ಸಾಮಾನ್ಯ ಜ್ವರವಿತ್ತು ಮತ್ತು ನಾನು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ.ಮೂರರಿಂದ ಆರು ತಿಂಗಳವರೆಗೆ ನಾನು ಚಿತ್ರೀಕರಣ ಮಾಡಲು ಸಾಧ್ಯವಿಲ್ಲ ಎಂಬ ಊಹಾಪೋಹಗಳು ಇದ್ದವು, ಆದರೆ ಅದರಲ್ಲಿ ಯಾವುದೇ ಸತ್ಯವಿಲ್ಲ. ನೀವು ನೋಡುವಂತೆ, ನಾನು ಈ ಮೈಕ್ ಅನ್ನು ಸ್ಥಿರವಾಗಿ ಹಿಡಿದಿದ್ದೇನೆ ಮತ್ತು ನಾನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ.

ಪ್ರತಿಯೊಬ್ಬರೂ ಈ ಚಿತ್ರವನ್ನು ಆನಂದಿಸುತ್ತಾರೆ ಎಂದು ನಾನು ನಂಬುತ್ತೇನೆ. ” ನನ್ನ ಕೊನೆಯ ಉಸಿರು ಇರುವವರೆಗೂ ನೀವು ನನಗೆ ತೋರಿದ ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದು ವಿಶಾಲ್ ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ತಮ್ಮ ಭಾಷಣವನ್ನು ಮುಗಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments