Wednesday, April 30, 2025
29.2 C
Bengaluru
LIVE
ಮನೆ#Exclusive NewsTop Newsರೇಣುಕಾಸ್ವಾಮಿ ಕುಟುಂಬಕ್ಕೆ 1 ಲಕ್ಷ ನೆರವು ನೀಡಿದ: ನಟ ವಿನೋದ್ ರಾಜ್

ರೇಣುಕಾಸ್ವಾಮಿ ಕುಟುಂಬಕ್ಕೆ 1 ಲಕ್ಷ ನೆರವು ನೀಡಿದ: ನಟ ವಿನೋದ್ ರಾಜ್

ಚಿತ್ರದುರ್ಗ: ನಗರದ ಮೃತ ರೇಣುಕಾಸ್ವಾಮಿ ಮನೆಗೆ ನಟ ವಿನೋದ್ ರಾಜ್ ಭೇಟಿ ನೀಡಿದ್ದಾರೆ. ರೇಣುಕಾಸ್ವಾಮಿ ಕುಟುಂಬಸ್ಥರಿಗೆ ವಿನೋದ್ ರಾಜ್ ಸಾಂತ್ವಾನ ಹೇಳಿ 1 ಲಕ್ಷ ರೂ. ನೆರವು ನೀಡಿದ್ದಾರೆ.

ಮೃತ ರೇಣುಕಾಸ್ವಾಮಿ ನಿವಾಸಕ್ಕೆ ತೆರಳಿ ಪೋಷಕರಿಗೆ ಮತ್ತು ರೇಣುಕಾಸ್ವಾಮಿ ಪತ್ನಿ ಸಹನಾಗೆ ವಿನೋದ್ ರಾಜ್ ಸಾಂತ್ವಾನ ಹೇಳಿದ್ದಾರೆ. ನಿಮ್ಮ ಮಗ ಮರಳಿ ಬರಲಿ ಅಂತ ಹಾರೈಸಿದ್ದಾರೆ. ಬಳಿಕ 1 ಲಕ್ಷ ರೂ. ಕೊಡುವ ಮೂಲಕ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದಾರೆ.

ವಿನೋದ್ ರಾಜ್ ಭೇಟಿಯ ಬಗ್ಗೆ ರೇಣುಕಾಸ್ವಾಮಿ ತಂದೆ ಶಿವನಗೌಡ ಪ್ರತಿಕ್ರಿಯೆ ನೀಡಿದ್ದು, ಮಗನ ಕಳೆದುಕೊಂಡು ಕರಳು ಕಿತ್ತು ಬರುತ್ತಿದೆ. ಈ ಪ್ರಕರಣದಿಂದ ನಾವು ನೊಂದಿದ್ದೇವೆ. ನಮ್ಮ ಕುಟುಂಬ ಸಂಕಷ್ಟದಲ್ಲಿದೆ. ಮಗನ ಕೊಂದವರು ಯಾರು ಎಂಬುದು ನಮಗೆ ಗೊತ್ತಿಲ್ಲ. ಆದರೆ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ನಟಿ ಲೀಲಾವತಿ ಅವರ ಬಗ್ಗೆ ತುಂಬಾ ಕೇಳಿದ್ದೇನೆ.’ ಇದೀಗ ಅವರ ಮಗ ವಿನೋದ್ ರಾಜ್ ನಮ್ಮ ಮನೆಗೆ ಭೇಟಿ ನೀಡಿದ್ದು, ಸಮಾಧಾನ ತಂದಿದೆ ಎಂದು ಮಾತನಾಡಿದ್ದಾರೆ. ಅಂದಹಾಗೆ, ಜು.23ರಂದು ವಿಜಯಲಕ್ಷ್ಮಿ ಕುಟುಂಬದ ಜೊತೆ ದರ್ಶನ್‌ರನ್ನು ಜೈಲಿನಲ್ಲಿ ವಿನೋದ್‌ ರಾಜ್ ಭೇಟಿಯಾಗಿದ್ದರು.‌ ದರ್ಶನ್‌ ಜೈಲಿನಲ್ಲಿರೋದು ನೋವು ತಂದಿದೆ ಎಂದು ಮಾತನಾಡಿದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments