‘ಫ್ಯಾಮಿಲಿ ಸ್ಟಾರ್’ ಚಿತ್ರದ ಬಳಿಕ ಟಾಲಿವುಡ್‌ನ ಲೈಗರ್ ವಿಜಯ್ ದೇವರಕೊಂಡ (Vijay Devarakonda) ಹೊಸ ಸಿನಿಮಾದ ಚಿತ್ರೀಕರಣಕ್ಕಾಗಿ ಶ್ರೀಲಂಕಾದಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ‘VD 12’ ಸಿನಿಮಾ ಚಿತ್ರೀಕರಣದ ಫೋಟೋ ಲೀಕ್ ಆಗಿದೆ. ವಿಜಯ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕಳೆದ ಕೆಲವು ದಿನಗಳಿಂದ ವಿಜಯ್ ದೇವರಕೊಂಡ, 12ನೇ ಸಿನಿಮಾದ ಚಿತ್ರೀಕರಣ ಶ್ರೀಲಂಕಾದಲ್ಲಿ (Srilanka) ಮಾಡಲಾಗ್ತಿದೆ. ವಿಭಿನ್ನ ಕಥೆಗೆ ಡಿಫರೆಂಟ್ ಪಾತ್ರದಲ್ಲಿ ವಿಜಯ್ ಕಾಣಿಸಿಕೊಳ್ತಿದ್ದಾರೆ. ಸದ್ಯ ಕೂದಲು ಟ್ರೀಮ್ ಮಾಡಿಸಿಕೊಂಡಿದ್ದು, ಬೈಕ್‌ನಲ್ಲಿ ಹೋಗುತ್ತಿರುವ ಶೂಟಿಂಗ್ ಫೋಟೋ ಈಗ ಲೀಕ್ ಆಗಿದೆ. ಚಿತ್ರತಂಡ ಲೀಕ್ ಆಗದಂತೆ ಜಾಗ್ರತೆ ವಹಿಸಿದ್ದರು ಕೂಡ ಹೀಗೆ ಆಗಿರೋದಕ್ಕೆ ತಲೆಕೆಡಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ವಿಜಯ್ ಫೋಟೋವನ್ನು ಎಲ್ಲೂ ಶೇರ್ ಮಾಡದಂತೆ ಮನವಿ ಮಾಡಿದ್ದಾರೆ. ಆದರೆ ಹೊಸ ಸಿನಿಮಾದಲ್ಲಿ ವಿಜಯ್ ಲುಕ್ ಹೇಗಿದೆ ಎಂದು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.