ಬಾಲಿವುಡ್ ನಟ ವಿಕ್ಕಿ ಕೌಶಲ್ (Vicky Kaushal) ಮತ್ತು ರಶ್ಮಿಕಾ (Rashmika Mandanna) ನಟನೆಯ ಚಾವಾ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದರ ನಡುವೆ ಸಂದರ್ಶನವೊಂದರಲ್ಲಿ ‘ಚಾವಾ’ (Chhaava) ಸಿನಿಮಾ ಮತ್ತು ರಶ್ಮಿಕಾ ಜೊತೆ ನಟಿಸಿದ ಅನುಭವದ ಬಗ್ಗೆ ನಟ ಹಂಚಿಕೊಂಡಿದ್ದಾರೆ. ರಶ್ಮಿಕಾಗೆ ಸ್ವೀಟ್ ಹಾರ್ಟ್ ಎಂದು ವಿಕ್ಕಿ ಕೌಶಲ್ ಬಣ್ಣಿಸಿದ್ದಾರೆ. ಸಂದರ್ಶನವೊಂದರಲ್ಲಿ ವಿಕ್ಕಿ ಕೌಶಲ್ ಮಾತನಾಡಿ, ‘ಚಾವಾ’ ಸಿನಿಮಾದಲ್ಲಿ ಮೊದಲ ಬಾರಿಗೆ ನಾನು ಮತ್ತು ಜೊತೆಯಾಗಿ ನಟಿಸಿದೆವು. ಅವರು ಸಿನಿಮಾ ಸೆಟ್‌ನಲ್ಲಿ ಯಾವಾಗಲೂ ಪಾಸಿಟಿವಿಯಿಂದ ಇರುತ್ತಾರೆ. ರಶ್ಮಿಕಾ ಹೃದಯದಿಂದ ಕೂಡ ಸುಂದರವಾಗಿದ್ದಾರೆ ಎಂದಿದ್ದಾರೆ. ರಶ್ಮಿಕಾ ಎಂದರೆ ಸ್ವೀಟ್ ಹಾರ್ಟ್ ಎಂದು ಮಾತನಾಡಿದ್ದಾರೆ ನಟಿ ಪ್ರತಿಭೆಯಿಂದ ಮಾತ್ರವಲ್ಲ ಆಕೆಗೆ ಪಾಸಿಟಿವಿ ನೋಡಿಯೇ ರಶ್ಮಿಕಾರನ್ನು ಫ್ಯಾನ್ಸ್ ಆರಾಧಿಸುತ್ತಾರೆ. ಫ್ಯಾನ್ಸ್ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಅವರ ಜೀವನ ಮತ್ತು ವೃತ್ತಿಯ ಕುರಿತು ಆಗಾಗ ಫ್ಯಾನ್ಸ್‌ಗೆ ಅಪ್‌ಡೇಟ್ ಕೊಡುತ್ತಲೇ ಇರುತ್ತಾರೆ ಎಂದು ವಿಕ್ಕಿ ಕೌಶಲ್ ಅವರು ರಶ್ಮಿಕಾ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com