Top Newsಸಿನಿಮಾಸುದ್ದಿ

ಬಿಗ್‌ಬಾಸ್‌ ನಿರೂಪಣೆಗೆ ಸುದೀಪ್‌ ವಿದಾಯ: ಟ್ವಿಟರ್​ನಲ್ಲಿ ಕಿಚ್ಚನ ಅಧಿಕೃತ ಘೋಷಣೆ!

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮುಂದಿನ ಸೀಸನ್ ನಿರೂಪಣೆಯಿಂದ ಕಿಚ್ಚ ಸುದೀಪ್ ದೂರ ಉಳಿಯಲು ನಿರ್ಧರಿಸಿದ್ದಾರೆ. ಈ ಕುರಿತು ತಮ್ಮ ಟ್ವಿಟರ್‌ನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. ಬಿಗ್ ಬಾಸ್ ಸೀಸನ್ 11ಕ್ಕೆ ಉತ್ತಮ ಟಿಆರ್‌ಪಿ ಬಂದ ಬೆನ್ನಲ್ಲೇ ಸುದೀಪ್ ಈ ಮಾಹಿತಿ ಹಂಚಿಕೊಂಡಿದ್ದಾರೆ. ‘ಬಿಗ್ ಬಾಸ್ 11ಕ್ಕೆ ಹಾಗೂ ನನಗೆ ವೀಕ್ಷಕರು ತೋರಿದ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ.

ಈ 11 ವರ್ಷಗಳ ಪಯಣ ಸ್ಮರಣೀಯವಾದದ್ದು. ಈಗ ನಾನು ಮಾಡಬೇಕಾದ ಕೆಲಸದ ಕಡೆ ಸಾಗ ಬೇಕಾಗಿದೆ. ಬಿಗ್ ಬಾಸ್ ನಿರೂಪಕನಾಗಿ ಇದು ನನ್ನ ಕೊನೆಯ ಸೀಸನ್. ನನ್ನ ಈ ನಿರ್ಧಾರವನ್ನು ಕಲರ್ಸ್‌ ವಾಹಿನಿ ಹಾಗೂ ಬಿಗ್‌ಬಾಸ್ ವೀಕ್ಷಕರು ಗೌರವಿ ಸುತ್ತಾರೆ ಎಂದು ಭಾವಿಸಿರುವೆ.

ಈ ಸೀಸನ್ ಉತ್ತಮವಾಗಿಸಿ, ಪ್ರೇಕ್ಷಕರನ್ನು ರಂಜಿಸಲು ಶ್ರಮಿ ಸುವೆ. ಎಲ್ಲರಿಗೂ ಪ್ರೀತಿಯ ವಂದನೆಗಳು’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ 11ನೇ ಆವೃತ್ತಿ ಆರಂಭಕ್ಕೂ ಮುನ್ನವೇ ಅವರ ನಿರೂಪಣೆ ಬಗ್ಗೆ ಹಲವು ಗೊಂದಲ ಎದ್ದಿದ್ದವು.. ಈಗ ಅವರಿಂದಲೇ ಸ್ಪಷ್ಟನೆ ದೊರಕಿದೆ.

Comments (0)

Your email address will not be published. Required fields are marked *

Back to top button