ಸಿನಿಮಾ

ಜೈಲಿನಲ್ಲಿ ದರ್ಶನ್ ಭೇಟಿಯಾದ ಸಾಧುಕೋಕಿಲ

ಕೊಲೆ ಪ್ರಕರಣದ ಸಂಬಂಧ ಜೈಲಿನಲ್ಲಿರುವ ದರ್ಶನ್‌ರನ್ನು (Darshan) ಕೊನೆಗೂ ಹಾಸ್ಯ ನಟ ಸಾಧುಕೋಕಿಲ ಭೇಟಿಯಾಗಿದ್ದಾರೆ. ಅವರನ್ನು ನೋಡಿ ಸಮಾಧಾನ ಆಯ್ತು ಎಂದು ದರ್ಶನ್‌ ಭೇಟಿಯ ಬಗ್ಗೆ ಸಾಧುಕೋಕಿಲ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸಚ್ಚಿದಾನಂದ, ನಿರ್ಮಾಪಕ ರಾಮಮೂರ್ತಿ ಜೊತೆ ಸಾಧುಕೋಕಿಲ ಜೈಲಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಎಲ್ಲಾ ಸ್ನೇಹಿತರು ನಟ ದರ್ಶನ್ ಅವರನ್ನು ಭೇಟಿ ಮಾಡಿದ್ವಿ, ಜೈಲಿನಲ್ಲಿ ದರ್ಶನ್ ಅವರು ಕೂಲ್ ಆಗಿ ಇದ್ದರು. ಅವರನ್ನು ನೋಡಿ ನಮಗೂ ಸಮಾಧಾನವಾಯ್ತು ಎಂದು ಮಾತನಾಡಿದ್ದಾರೆ. ಸೆಲ್‌ನಲ್ಲಿ ಬುಕ್ಸ್ ಓದಿಕೊಂಡು ಕೂಲ್ ಅಂಡ್ ಕಾಮ್ ಆಗಿ ಇದ್ದಾರೆ. ಅವರನ್ನು ನೋಡಿ ನಮಗೂ ನೆಮ್ಮದಿ ಸಿಕ್ತು ಎಂದಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button