ನಟ ದರ್ಶನ್ ನೇರಾ-ನೇರ ನಡವಳಿಕೆಗೆ ಹೆಸರಾದವರು.. ನೇರವಂತಿಕೆಯ ಜೊತೆಗೆ ಹೃದಯವಂತಿಕೆಗೂ ಕೂಡ ಹೆಸರಾದವ್ರು, ತಾನು ಬೆಳೆದು ತನ್ನವರನ್ನು ಬೆಳೆಸೊ ಗುಣ ದರ್ಶನ್ ಅವರದ್ದು, ಇದಕ್ಕೆ ಕೈಗನ್ನಡಿಯಂತೆ ಕನ್ನಡ ಇಂಡಸ್ಟ್ರಿಯಲ್ಲಿ ಅನೇಕ ನಟ-ನಟಿಯರಿಗೆ ಬೆನ್ನಲುಬಾಗಿದ್ದರು.
ಆದರೆ ದುರ್ದೈವ ಎಂಬಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದಾರೆ ಅಭಿಮಾನಿಗಳು ಸಮಾಜಕ್ಕೆ ಉತ್ತಮವಾದ ಸಂದೇಶ ನೀಡಬೇಕಿದ್ದ ನಮ್ಮ ಹೀರೋ ಹೀಗೆ ದುಷ್ಕೃತ್ಯದ ಪಾಲುದಾರರಾಗಿ ಜೈಲು ಸೇರಿದರಲ್ಲ ಎಂದು ಕೊರಗುತ್ತಿದ್ದಾರೆ..
ಹೀಗಿರುವಾಗ ದರ್ಶನ್ ಕುರಿತು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮಾತನಾಡಿದ್ದಾರೆ. ಸಾಮಾನ್ಯವಾಗಿ ನಮ್ಮ ಫ್ರೆಂಡ್ಸ್ ಗೆ ಏನಾದರೂ ತೊಂದರೆಯಾದರೆ ನಮಗೆ ನೋವಾಗುತ್ತೆ, ಹೀಗಿರುವಾಗ ದರ್ಶನ್ ನನ್ನ ಪಾಲಿಗೆ ಅಣ್ಣ ಇದ್ದಂತೆ, ನಮ್ಮ ಮನೆತನಕ್ಕೆ ದರ್ಶನ್ ಅಣ್ಣ ಎಷ್ಟು ಹತ್ತಿರವಾಗಿದ್ದವರು ಅಂತ ಎಲ್ಲರಿಗೂ ಗೊತ್ತಿರುವ ವಿಚಾರ..
ಕಳೆದ ಬಾರಿ ಜೈಲಿಂದ ಬಂದ ನಂತರ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ.ಅವರನ್ನು ನೋಡಲು ಆಗಿರಲಿಲ್ಲ.ಈ ಹಿಂದೆ ನಾನು ಹಲವು ಬಾರಿ ಪ್ರಯತ್ನಿಸಿದ್ದರು, ಯಾವುದೇ ಪ್ರಯೋಚನವಾಗಲಿಲ್ಲ. ಈ ವಿಚಾರ ನೆನೆದಾಗಲೆಲ್ಲ ಮನಸ್ಸಿಗೆ ತುಂಬಾ ನೋವಾಗುತ್ತದೆ.
ದರ್ಶನ್ ಬಗ್ಗೆ ಮಾತ್ರ ಮಾತನಾಡದ ಪ್ರಜ್ವಲ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಗ್ಗೆಯೂ ಮಾತನಾಡಿದ್ದು ವಿಜಯಲಕ್ಷೀಯವರಿಗೆ ಬೆಂಬಲ ಬೇಕಿಲ್ಲ, ಏಕೆಂದರೆ ಅವ್ರು ತುಂಬಾ ಗಟ್ಟಿಗಿತ್ತಿ.. ಅವರು ಎಷ್ಟು ಹೋರಾಡಿದ್ದಾರೆ ಎಂಬುದು ಇಡೀ ಕರ್ನಾಟಕಕ್ಕೆ ಗೊತ್ತು, ಎಂದಿಗೂ ನಾವು ಅವರ ಜೊತೆಯಲ್ಲೇ ಇರುತ್ತೇವೆ ಎಂದಿದ್ದಾರೆ..