ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ಇಂದು ಮುಂಜಾನೆ ನಿಧಾನರಾಗಿದ್ದಾರೆ. ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.
ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ಮಂಗಳೂರು ಮೂಲದವರಾಗಿದ್ದರು. ತುಳು ಅವರ ಮಾತೃಭಾಷೆಯಾಗಿತ್ತು. ಈ ಬಗ್ಗೆ ಸುದೀಪ್ ಹಿಂದೆ ಹೇಳಿಕೊಂಡಿದ್ದರು.ಆಗಾಗ್ಗೆ ಕೆಲವು ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಸುದೀಪ್ರ ತಾಯಿ ಭಾಗವಹಿಸುತ್ತಿದ್ದರು. ಸುದೀಪ್ ಲಾಂಚ್ ಮಾಡಿದ ಸಹೋದರಿಯ ಮಗನ ಸಿನಿಮಾ ಕಾರ್ಯಕ್ರಮಕ್ಕೆ ಅವರು ಬಂದಿದ್ದರು.
ಸುದೀಪ್ ಅವರು ತಾಯಿಯೊಂದಿಗೆ ಬಹಳ ಆತ್ಮೀಯ ಬಂಧ ಹೊಂದಿದ್ದರು. ಸುದೀಪ್ರ ತಾಯಿಯವರು ಅವರೊಡನೆ ಜೆಪಿ ನಗರದ ನಿವಾಸದಲ್ಲಿಯೇ ನೆಲೆಸಿದ್ದರು.ಸುದೀಪ್ರ ತಾಯಿಯ ಪಾರ್ಥಿವ ಶರೀರವನ್ನು 11 ಗಂಟೆ ವೇಳೆಗೆ ಜೆಪಿ ನಗರ ನಿವಾಸಕ್ಕೆ ಕರೆತರಲಾಗುವುದು, ಸುದೀಪ್ ಮನೆಯ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಸಹ ಮಾಡಲಾಗಿದೆ.
ನಟ ಕಿಚ್ಚ ಸುದೀಪ್ ತಾಯಿ ಸರೋಜಾ ನಿಧನ!
RELATED ARTICLES