#Exclusive NewsFreedom TVTop Newsಜಿಲ್ಲೆಮನರಂಜನೆಸಿನಿಮಾಸುದ್ದಿ

ಮ್ಯಾಕ್ಸ್ ಸಿನಿಮಾ ಯಶಸ್ವಿ ನಂತರ ನಟ ಕಿಚ್ಚ ಸುದೀಪ್ ಟೆಂಪಲ್​ ರನ್​…!​

ಬೆಳಗ್ಗೆಯೇ ಮೈಸೂರಿಗೆ ಭೇಟಿ ನೀಡಿದ ನಟ ಕಿಚ್ಚ ಸುದೀಪ್​​ ಅವರು ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನೆಚ್ಚಿನ ನಟ ಬರುವುದನ್ನು ತಿಳಿಯುತ್ತಿದ್ದಂತೆ ಬೆಟ್ಟದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.ಕಿಚ್ಚ ಸುದೀಪ್ ನೋಡಿ ಫ್ಯಾನ್ಸ್ ಶಿಳ್ಳೆ ಹೊಡೆದು ಜೈಕಾರ ಕೂಗಿದರು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಪೂಜೆ ಬಳಿಕ ಸುದೀಪ್ ಹೊರಬಂದು ನೆರೆದಿದ್ದ ಅಭಿಮಾನಿಗಳತ್ತ ಕೈಬೀಸಿದರು. ನಟನನ್ನು ಕಂಡು ಫ್ಯಾನ್ಸ್ ಸಂತಸ ವ್ಯಕ್ತಪಡಿಸಿದರು.ಮ್ಯಾಕ್ಸ್ ಸಿನಿಮಾ ಇದೇ ಡಿ.25 ರಂದು ರಾಜ್ಯಾದ್ಯಂತ ತೆರೆ ಕಂಡಿತು. ರಿಲೀಸ್ ಆಗಿ 4 ದಿನವನ್ನು ಪೂರೈಸಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.

Comments (0)

Your email address will not be published. Required fields are marked *

Back to top button