ಮೈಸೂರು : ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ಮೈಸೂರಿನಲ್ಲಿ 2025ರ ಫೆಬ್ರವರಿ 15 ಮತ್ತು 16ರಂದು ನಡೆಯಲಿದೆ. ಆಕ್ಟರ್ & ಡಾಕ್ಟರ್ ಮದುವೆ ಬಂದು ಆಶೀರ್ವಾದ ಮಾಡಿ ಅಂತ ಡಾಲಿ ಎಲ್ಲರನ್ನೂ ಇನ್ವೈಟ್ ಮಾಡಿದ್ದಾರೆ. ತುಂಬಾ ವಿಭಿನ್ನವಾಗಿ ಅಂಚೆ ಪತ್ರಿಕೆ ರೀತಿ ಮದುವೆ ಆಮಂತ್ರಣ ಪತ್ರಿಕೆ ಮಾಡಿಸಿದ್ದಾರೆ. ಕೈಬರಹದ ಮೂಲಕ ಮದುವೆ ಕರೆಯೋಲೆ ಸಿದ್ಧಪಡಿಸಿದ್ದು ವಿಶೇಷವಾಗಿದೆ.
ಚಾಮುಂಡಿ ಬೆಟ್ಟಕ್ಕೆ ನಟ ಡಾಲಿ ಧನಂಜಯ್ ಹಾಗೂ ಭಾವಿ ಪತ್ನಿ ಡಾ. ಧನ್ಯತಾ ಭಾನುವಾರ ಬೆಳಗ್ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಡಾಲಿ ಧನಂಜಯ್ ಮದುವೆ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿ ದರ್ಶನ ಪಡೆದಿದ್ದಾರೆ. ಬಳಿಕ ಲಗ್ನ ಪತ್ರಿಕೆಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಅವರ ಜೊತೆ ಭಾವಿ ಪತ್ನಿ ಡಾ. ಧನ್ಯತಾ ಕೂಡ ಇದ್ದರು.