ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ (Daali Dhananjay) ಅಜ್ಜಿ ಮಲ್ಲಮ್ಮ (Mallamma) ಅವರು 95ನೇ ವಯಸ್ಸಿಗೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಾಸನ ಜಿಲ್ಲೆಯ ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಜ್ಜಿ ಮಲ್ಲಮ್ಮಗೆ 5 ಜನ ಮಕ್ಕಳಿದ್ದರು. ಅದರಲ್ಲಿ ಡಾಲಿ ಅವರ ತಂದೆ ಅಡವಿಸ್ವಾಮಿ ಎರಡನೇಯವರಾಗಿದ್ದಾರೆ. ಇದೀಗ ವಯೋಸಹಜ ಕಾಯಿಲೆಯಿಂದ ಮಲ್ಲಮ್ಮ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.