ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಸದ್ಯ ಡೆವಿಲ್ ಸಿನಿಮಾದ ಶೂಟಿಂಗ್ನಲ್ಲಿ ತೊಡಗಿದ್ದಾರೆ.. ಡೆವಿಲ್ ಸಿನಿಮಾದ ಶೂಟಿಂಗ್ ಅನ್ನು ಥೈಲ್ಯಾಂಡ್ನಲ್ಲಿ ಇಟ್ಟುಕೊಳ್ಳಲು ಚಿತ್ರತಂಡ ನಿರ್ಧರಿಸಿದೆ.. ಹೀಗಾಗಿ ದರ್ಶನ್ ವಿದೇಶಕ್ಕೆ ತೆರಳಬೇಕಾಗಿದೆ. ಈ ಹಿನ್ನೆಲೆ ನಟ ದರ್ಶನ್ ವಿದೇಶಕ್ಕೆ ತೆರಳಲು ಕೋರ್ಟ್ ಕೂಡ ಅನುಮತಿ ನೀಡಿದೆ. ಜುಲೈ 11ರಿಂದ ಜುಲೈ 30ರವರೆಗೆ ದರ್ಶನ್ ವಿದೇಶಕ್ಕೆ ತೆರಳಲು 57ನೇ ಸೆಷನ್ಸ್ ಕೋರ್ಟ್ ಅವಕಾಶ ನೀಡಿದೆ..
ಪ್ರಸ್ತುತ ಷರತ್ತುಬದ್ಧ ಜಾಮೀನಿನ ಮೇಲೆ ಹೊರಗಿರುವ ದರ್ಶನ್, ದುಬೈ ಮತ್ತು ಯುರೋಪ್‌ಗೆ ಪ್ರಯಾಣಿಸಲು ಅನುಮತಿ ಕೋರಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 439(1)(ಬಿ) ಅಡಿಯಲ್ಲಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು..
ವಿಶೇಷ ಸರ್ಕಾರಿ ಅಭಿಯೋಜಕರು, ನಟ ಅರ್ಜಿಯನ್ನು ಬಲವಾಗಿ ವಿರೋಧಿಸಿದ್ದರು. ದರ್ಶನ್ ದೇಶವನ್ನು ಬಿಡಲು ಅನುಮತಿ ನೀಡಿದರೆ, ಅವರು ವಾಪಸ್ ಬರದಿರಬಹುದು ಮತ್ತು ವಿಚಾರಣೆಯ ಪ್ರಕ್ರಿಯೆಯ ಹಳಿತಪ್ಪಿಸಬಹುದು ಎಂದು ವಾದಿಸಿದ್ದರು. ಆದರೂ ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ ನೀಡಿದೆ
ದಸರಾದಲ್ಲಿ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗಿದೆ. ಡೆವಿಲ್ ಸಿನಿಮಾ ನೋಡೋಕೆ ಡಿ ಫ್ಯಾನ್ಸ್ ಕಾಯ್ತಿದ್ದಾರೆ..