Top Newsಸಿನಿಮಾಸುದ್ದಿ

ಮೆಡಿಕಲ್‌ ರಿರ್ಪೋಟ್‌ನಲ್ಲಿ ದರ್ಶನ್‌ಗೆ L 5, S1ನಲ್ಲಿ ಸಮಸ್ಯೆ ಇರುವುದು ದೃಢ- ಸರ್ಜರಿಗೆ ಒಪ್ಪಿಸಲು ಜೈಲು ಅಧಿಕಾರಿಗಳು ಸರ್ಕಸ್

ಬೆನ್ನು ನೋವಿನಿಂದ ಬಳಲುತ್ತಿದ್ದ ಆರೋಪಿ ದರ್ಶನ್ ಅವರ ಮೆಡಿಕಲ್ ಸ್ಕ್ಯಾನಿಂಗ್ ರಿರ್ಪೋಟ್‌ನಲ್ಲಿ L 5, S1 ಸಮಸ್ಯೆ ಇರುವುದು ದೃಢಪಟ್ಟಿದೆ. ಹಾಗಾಗಿ ಸರ್ಜರಿ ಕುರಿತು ಚರ್ಚಿಸಲು ನಾಳೆ ಬಳ್ಳಾರಿ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡುವ ಸಾಧ್ಯತೆಯಿದೆ.

ಆರಂಭದಲ್ಲಿ ದರ್ಶನ್ ಚಿಕಿತ್ಸೆ ಬೇಡ, ಸ್ಕ್ಯಾನಿಂಗ್ ಬೇಡ ಎನ್ನುತ್ತಿದ್ದರು. ಆದರೆ ಕಳೆದೆರಡು ವಾರಗಳಿಂದ ದರ್ಶನ್‌ಗೆ ಆ ಬೆನ್ನು ನೋವನ್ನ ತಡೆಯುವುದಕ್ಕೆ ಆಗದೇ, ಹೈ ಸೆಕ್ಯುರಿಟಿ ಸೆಲ್‌ನಲ್ಲೇ ಒಬ್ಬರೇ ಒದ್ದಾಡುತ್ತಿದ್ದರು. ಇದನ್ನ ನೋಡಿದ ಜೈಲಾಧಿಕಾರಿಗಳು ನೀವು ಚಿಕಿತ್ಸೆ ಪಡಿಯಲೇ ಬೇಕು ಅಂತ ನಟಿನಿಗೆ ಸೂಚನೆ ನೀಡಿದ್ದರು. ಬಳಿಕ ಜೈಲಿಗೆ ವಿಮ್ಸ್ ನ ಅರ್ಥೊಪೆಡಿಕ್ ಹಾಗೂ ನ್ಯೂರೋ ಸರ್ಜನ್ ಡಾ. ವಿಶ್ವನಾಥ ಭೇಟಿ ನೀಡಿ, ದರ್ಶನ್ ಆರೋಗ್ಯ ಪರಿಶೀಲನೆ ಮಾಡಿದ್ದರು. ಪರಿಶೀಲನೆ ಬಳಿಕ ಇದು ಬಹಳ ತೊಂದರೆ ಉಂಟು ಮಾಡಿದೆ, ಹೀಗಾಗಿ ತಕ್ಷಣ ಸ್ಕ್ಯಾನಿಂಗ್ ಮಾಡಿಸಬೇಕು ಅಂತ ಸೂಚನೆ ನೀಡಿದ್ದರು. ಜೊತೆಗೆ ಪೇನ್ ಕಿಲ್ಲರ್ ಮಾತ್ರೆಗಳನ್ನು ನೀಡಿ ಸ್ವಲ್ಪ ಸುಧಾರಿಸಿಕೊಳ್ಳಲು ದರ್ಶನ್‌ಗೆ ತಿಳಿಸಿದ್ದರು.

ವಿಮ್ಸ್ ನಲ್ಲಿ ನಡೆಸಿದ್ದ ಸ್ಕ್ಯಾನಿಂಗ್ ರಿಪೋರ್ಟ್ ಇಂದು ಜೈಲಾಧಿಕಾರಿಗಳ ಕೈ ಸೇರಿದೆ. MRI ಸ್ಕ್ಯಾನ್ ಸಂದರ್ಭದಲ್ಲಿ L 5 S1ನಲ್ಲಿ ಸಮಸ್ಯೆ ಇರುವುದು ಕಂಡು ಬಂದಿದೆ. ನಿನ್ನೆ ರಾತ್ರಿಯೇ ಜೈಲಿಗೆ ಬಂದು L 5 S1 ಸಮಸ್ಯೆ ಬಗ್ಗೆ ವೈದ್ಯರು ಮನವರಿಕೆ ಮಾಡಿಕೊಟ್ಟಿದ್ದಾರೆ. ನಿರ್ಲಕ್ಷ್ಯ ಮಾಡದೇ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿಸುವ ಬಗ್ಗೆ ವರದಿ ನೀಡಿದ್ದಾರೆ. ವೈದ್ಯರ ವರದಿಯನ್ನು ಆಧರಿಸಿ ಜೈಲು ಅಧಿಕಾರಿಗಳು ದರ್ಶನ್ ಪತ್ನಿ ವಿಜಯಲಕ್ಷ್ಮಿಯೊಂದಿಗೆ ಚರ್ಚಿಸಿ ಶಸ್ತ್ರಚಿಕಿತ್ಸೆ ಮಾಡಿಸುವ ಕುರಿತು ನಿರ್ಧರಿಸುವ ಸಾಧ್ಯತೆ ಇದೆ. ಹೀಗಾಗಿ ನಾಳೆ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ಬರುವ ಸಾಧ್ಯತೆ ಇದೆ.

ಒಟ್ನಲ್ಲಿ ಕೊಲೆ ಆರೋಪಿ ದರ್ಶನ್ ಗಿರುವ ಬೆನ್ನು ನೋವು ಜೈಲು ಅಧಿಕಾರಿಗಳಿಗೆ ಟೆನ್ಷನ್ ತಂದೊಡ್ಡಿದೆ. ಹೀಗಾಗಿ ಮೆಡಿಕಲ್ ರಿಪೋರ್ಟ್ ಆಧಾರದ ಮೇಲೆ ದರ್ಶನ್ ರನ್ನ ಸರ್ಜರಿಗೆ ಒಪ್ಪಿಸಲು ಜೈಲು ಅಧಿಕಾರಿಗಳು ಸರ್ಕಸ್ ಮಾಡ್ತಿದ್ದಾರೆ. ಆದರೆ ಆರೋಪಿ ದರ್ಶನ್ ಬಳ್ಳಾರಿಯಲ್ಲಿ ಚಿಕಿತ್ಸೆ ಬೇಡ, ಬೆಂಗಳೂರಿನಲ್ಲೇ ಚಿಕಿತ್ಸೆ ಪಡೆಯುವೆ ಅಂತ ಕಡ್ಡಿ ತುಂಡಾಗುವಂತೆ ಹೇಳಿದ್ದಾರೆ. ಹೀಗಾಗಿ ನಾಳೆ ಪತ್ನಿ ವಿಜಯಲಕ್ಷ್ಮಿ ಬಂದಾಗ ಎಲ್ಲವೂ ನಿರ್ಧಾರವಾಗಲಿದೆ ಎನ್ನಲಾಗಿದೆ.

Comments (0)

Your email address will not be published. Required fields are marked *

Back to top button