- ಹೆಣ್ಣು ಮಕ್ಕಳ ಬಗ್ಗೆ ನಟ ಚಿರಂಜೀವಿ ಹೇಳಿಕೆ
- ಚಿರಂಜೀವಿ ವಿರುದ್ದ ನೆಟ್ಟಿಗರಿಂದ ವಾಗ್ದಾಳಿ
- ಮೆಗಾಸ್ಟಾರ್ ನಿಂದ ಇದೆಂಥಾ ಮಾತು..?
ಭಾರತೀಯ ಚಲನಚಿತ್ರ ರಂಗದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಉನ್ನತ ಸ್ಥಾನಮಾನವಿದೆ. ಸತತ ಐದು ದಶಕಗಳಿಂದ ಸಕ್ರೀಯವಾಗಿ ಚಿತ್ರರಂಗದಲ್ಲಿರೋ ಚಿರಂಜೀವಿ ನೂರಾರು ಚಿತ್ರಗಳಲ್ಲಿ ನಟಿಸಿ ಸಿನಿಪ್ರೀಯರ ಮನಸ್ಸು ಗೆದ್ದಿದ್ದಾರೆ. ಇತ್ತಿಚಿಗಷ್ಟೇ ಅವರ ಸಾಧನೆಯನ್ನು ಪರಿಗಣಿಸಿ ಭಾರತ ಸರಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಇಂಥ ಸ್ಟಾರ ನಟನ ಹೇಳಿಕೆಯೊಂದು ಈಗ ವಿವಾದ ಸೃಷ್ಟಿಸಿದೆ.
ಮನೆಯ ತುಂಬ ಹೆಣ್ಣು ಮಕ್ಕಳೇ ತುಂಬಿದ್ದು, ನಮ್ಮ ವಂಶವನ್ನು ಉದ್ಧಾರ ಮಾಡಲು ಮನೆಗೊಬ್ಬ ಮೊಮ್ಮಗ ಬೇಕಿತ್ತು ಅನ್ನೋ ಮೂಲಕ ಚಿರಂಜೀವಿ ಹೆಣ್ಣು ಕುಲಕ್ಕೆ ಅವಮಾನ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹಾಸ್ಯನಟ ಬ್ರಹ್ಮಾನಂದಂ ಅವರು ನಟಿಸಿರುವ ‘ಬ್ರಹ್ಮ ಆನಂದಂ’ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚಿರಂಜೀವಿ ‘ನಮ್ಮ ಮನೆಯಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾನು ಮನೆಯಲ್ಲಿದ್ದಾಗ ಮಕ್ಕಳೊಟ್ಟಿಗೆ ಇದ್ದೇನೆ ಎನಿಸುವುದಿಲ್ಲ ಬದಲಿಗೆ ಲೇಡೀಸ್ ಹಾಸ್ಟೆಲ್ನ ವಾರ್ಡನ್ ಆಗಿದ್ದೇನೆ ಅನಿಸುತ್ತದೆ’ ಎಂದು ಹೇಳಿಕೆ ನೀಡಿದ್ದರು.
ಮುಂದುವರೆದು ಮಾತನಾಡಿದ ಚಿರಂಜೀವಿ, ‘ರಾಮ್ ಚರಣ್ ಗಂಡು ಮಗುವಿಗೆ ಜನ್ಮ ನೀಡಲಿ ಎಂಬುದು ನನ್ನ ಆಷಯವಾಗಿತ್ತು. ನಮ್ಮ ತಲೆಮಾರನ್ನು ರಾಮ್ ಚರಣ್ ಮಗ ಮುಂದೆ ತೆಗೆದುಕೊಂಡು ಹೋಗಲಿ ಎಂಬುದು ಉದ್ದೇಶವಾಗಿತ್ತು. ಆದರೆ ರಾಮ್ ಚರಣ್ಗೆ ಮಗಳೆಂದರೆ ಪ್ರಾಣ ಹಾಗಾಗಿ ರಾಮ್ ಚರಣ್ ಮತ್ತೊಂದು ಹೆಣ್ಣು ಮಗುವಿಗೆ ತಂದೆ ಆಗುತ್ತಾನೇನೋ ಎಂಬ ಭಯ ಇದೆ’ ಅಂತ ನಟ ಚಿರಂಜೀವಿ ಹೇಳಿದ್ದಾರೆ.
ಇದೀಗ ನಟ ಮೆಗಾಸ್ಟಾರ್ ಚಿರಂಜೀವಿ ಹೇಳಿಕೆ ವಿವಾದಕ್ಕೆ ಗುರಿಯಾಗಿದ್ದ, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.