ಚೆನ್ನೈ: ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಪತ್ನಿಯನ್ನು ಪತಿ ಮಾರಾಕಾಸ್ತ್ರದಿಂದ ಹತ್ಯೆ ಮಾಡಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯ ಮೃತದೇಹದ ಜೋತೆ ಸೇಲ್ಫಿ ತೆಗೆದುಕೊಂಡು ಸ್ಟೇಟಸ್ ಹಾಕಿರುವ ಭೂಪನನ್ನು ಪೊಲೀಸರು ಬಂಧಿಸಿದ್ಧಾರೆ.. ಶ್ರೀಪ್ರಿಯಾ ಹತ್ಯೆಯಾದ ಮಹಿಳೆಯಾಗಿದ್ದು, ಆರೋಪಿ ಪತಿ ಬಾಲಮುರಗನ್ ರನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..
ಶ್ರೀಪ್ರಿಯಾ, ತನ್ನ ಪತಿ ಬಾಲಮುರುಗನ್ ಅವರಿಂದ ಬೇರೆಯಾಗಿದ್ದು, ಕೊಯಮತ್ತೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರು.. ಪತಿ ಬಾಲಮುರಗನ್ ತನ್ನ ಪತ್ನಿಯನ್ನು ಭೇಟಿಯಾಗಲು ನಿನ್ನೆ ಹಾಸ್ಟೇಲ್ನಲ್ಲಿ ಉಳಿದುಕೊಂಡಿದ್ದರು, ಈ ವೆಳೆ ಇಬ್ಬರ ನಡುವೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ, ಬಾಲಮುರುಗನ್ ತಂದಿದ್ದ ಹರಿತವಾದ ಆಯುಧದಿಂದ ಪತ್ನಿ ಮೇಲೆ ಹಲ್ಲೆ ನಡೆಸಿದ ಪರಿಣಾಮ ಪತ್ನಿ ಸಾವನ್ನಪ್ಪಿದ್ದಾಳೆ..
ಘಟನೆ ನಡೆಯುತ್ತಿದ್ದಂತೆ ಹಾಸ್ಟೆಲ್ ನಲ್ಲಿದ್ದ ಮಂದಿ ಭಯಗೊಂಡು ಹೊರ ಓಡಿ ಬಂದಿದ್ದಾರೆ ಬಳಿಕ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ, ಕೂಡಲೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಬಳಿಯಿದ್ದ ಆಯುಧವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ಬಾಲಮುರುಗನ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ ವೇಳೆ ತನ್ನ ಪತಿ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದು ಇದರಿಂದ ನಾನು ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು ಪೊಲೀಸರು ಇನ್ನೂ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ತಮಿಳುನಾಡಿನಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ತೀವ್ರ ಕಳವಳ ಹುಟ್ಟುಹಾಕಿದೆ.


