ಹಾಸನದಲ್ಲಿ ಎಣ್ಣೆ ಮತ್ತಲ್ಲಿ ಸ್ನೇಹಿತನನ್ನೇ ಕೊಲೆಗೈದು ಸೆಲ್ಫಿ ವಿಡಿಯೋ ಮಾಡಿ, ವಿಕೃತಿ ಮೆರದಿದ್ದ ಆರೋಪಿಯನ್ನಿ ಹಾಸನದ ಪೊಲೀಸರು ಬಂಧಿಸಿದ್ಧಾರೆ..
ನಗರದ ಬಿಟ್ಟಗೋಡನಹಳ್ಳಿ ಬೈಪಾಸ್ ಬಳಿ ಸ್ನೇಹಿತ ಕೀರ್ತಿಯನ್ನು ಆರೋಪಿ ಉಲ್ಲಾಸ್ (21) ಡಿ.8 ರಂದು ಕೊಲೆಗೈದಿದ್ದ. ಈ ಇಬ್ಬರು ಆಟೋ ಚಾಲಕರಾಗಿದ್ದು, ಕಳೆದ ಎರಡು ವರ್ಷಗಳಿಂದ ಸ್ನೇಹಿತರಾಗಿದ್ದರು. ಡಿಸೆಂಬರ್ 8 ರಂದು ಮದ್ಯ ಸೇವಿಸಿ ಮಾತನಾಡುವಾಗ ಉಲ್ಲಾಸ್ ಕೆನ್ನೆಗೆ ಕೀರ್ತಿ ಬಾರಿಸಿದ್ದ. ಇದರಿಂದ ಕೋಪಗೊಂಡಿದ್ದ ಉಲ್ಲಾಸ್, ಮತ್ತೆ ಕುಡಿಯಲು ಆಟೋದಲ್ಲಿ ಕೀರ್ತಿ ಜೊತೆ ಇನ್ನಿಬ್ಬರನ್ನು ಕರೆದೊಯ್ದಿದ್ದ.
ಬಳಿಕ ಜಗಳ ಆರಂಭಿಸಿ ಮತ್ತಿನಲ್ಲಿ ಕೀರ್ತಿ ಮೇಲೆ ಹಲ್ಲೆ ನಡೆಸಿ, ಪಕ್ಕದಲ್ಲಿ ಇದ್ದ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.. ಮದ್ಯದ ನಶೆಯಲ್ಲಿ ಸೆಲ್ಫಿ ವಿಡಿಯೋ ಮಾಡಿ ಹರಿಬಿಟ್ಟಿದ್ದ. ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಆರೋಪಿಗಳಿಗೆ ಶೋಧ ನಡೆಸಿದ್ದರು. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.


