Freedom TV

ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಹೆಚ್ಚಿನ ಮಳೆ ಆಗುತ್ತೆ – ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು: ಈ ವರ್ಷ ನಮ್ಮ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಹೆಚ್ಚಿನ ಮಳೆ ಆಗುತ್ತೆ, ಮಳೆಗೆ ನಾವೆಲ್ಲ ಕಾತುರದಿಂದ ಕಾಯ್ತಾ ಇದ್ದೇವೆ , ನಿನ್ನೆ ಬಹಳಷ್ಟು ಕಡೆ ಮಳೆ ಬಂದಿದ್ದು ಸಂತಸದ ವಿಚಾರ ಮೇ ತಿಂಗಳಲ್ಲಿ ಪ್ರೀ ಮಾನ್ಸೂನ್ ಅವಧಿ ಇದು. ಕೆಲವು ಸಲ ಬಹಳ ಕಡಿಮೆ ಅಥವಾ ಜಾಸ್ತಿ ಬರುತ್ತೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಹೋದ ವರ್ಷ 15/16ರ ಹೊತ್ತಿಗೆ ಮಳೆ ಬಂತು, ಅವಘಡ ಸಂಭವಿಸಿತು,19 ಏಪ್ರಿಲ್ ಇಂದ ಮೇ 3ರವರೆಗೆ  ರಾಜಕಾಲುವೆ ಕ್ಲೀನ್ ಮಾಡುವ ಅಭಿಯಾನ ಕೈಗೊಂಡಿದ್ವಿ, ಈಗ ಸದ್ಯ ಅದನ್ನು ಮೇ 10 ಈವರೆಗೆ ಅವಧಿ ವಿಸ್ತರಣೆ ಮಾಡಿದ್ದೇವೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

ಮುಖ್ಯ ರಸ್ತೆಯಲ್ಲಿ ಡೆಬ್ರಿ, ಕ್ಲೀನ್ ಮಾಡುವ ಕೆಲಸ ಮಾಡಿದ್ವಿ,  ಪ್ರತೀ ತಿಂಗಳು ಮೂರನೇ ವಾರ ಇಂಟೆನ್ಸಿವ್ ಕ್ಲಿನಿಕ್ ಮಾಡಬೇಕು ಅಂತ ಸೂಚನೆ ಕೊಟ್ಟಿದ್ದೇವೆ, ಪ್ರತೀ ತಿಂಗಳಿಗೆ ಒಂದು ಸಲ ಕೆಲಸ ಇಂಟೆನ್ಸಿವ್ ಕ್ಲಿನಿಕ್ ಕೆಲಸ ಮಾಡಲೇಬೇಕು ಅಂತ ಡಿಸೈಡ್ ಮಾಡಿದ್ದೀವಿ, ಮೇ ತಿಂಗಳ ನಂತರ ಕೂಡ ಅಷ್ಟೇನು ಸಮಸ್ಯೆ ಆಗಲ್ಲ , Bwssb ಕೂಡ ನಮ್ಮ ಕಾಲುವೆಯಲ್ಲಿ ಹಲವು ಕೆಲಸ ಮಾಡ್ತಾಯಿದ್ದಾರೆ. ನಮ್ಮ ರೋಡ್ ಅಲ್ಲಿ ಬೆಸ್ಕಾಂ ಅವರು ಕೂಡ ಕೆಲಸ ಮಾಡ್ತಾರೆ . ಎಲ್ಲ ನಮ್ಮ ಜೋನಲ್ ಕಮಿಷನರ್ ಫೈರ್ ಡಿಪಾರ್ಟ್ಮೆಂಟ್ ,Bwssb ಎಲ್ಲರ ಜೊತೆ ಸಭೆ ಮಾಡಿ ಆಗಿದೆ. 15ರ ಒಳಗಡೆ ಕೆಲಸ ಮಾಡ್ಬೇಕು ಅಂತ ಟಾರ್ಗೆಟ್ ಕೊಟ್ಟಿದ್ದೇವೆ ಕಂಟ್ರೋಲ್ ರೂಂ ಅಲ್ಲಿ ಸಬ್ ಡಿವಿಜನ್ ಮಟ್ಟದಲ್ಲಿ 63 WhatsApp ಗ್ರೂಪ್ ಮಾಡಿದ್ದೀವಿ , 15 ತಾರೀಖಿನ ಬಳಿಕ 3 ಪಾಳಯದಲ್ಲಿ ಕೆಲಸ ಮಾಡ್ತಾರೆ . ಅವರೆಲ್ಲರೂ ಕೂಡ ಜನರ ಸಮಸ್ಯೆಗೆ ಪರಿಹಾರ ಕೊಡ್ತಾ ಇರ್ತಾರೆ ಎಂದು ತುಷಾರ್ ಗಿರಿನಾಥ್ ಹೇಳಿದರು.

ಫ್ರೀಡಂ ಟಿವಿಯಲ್ಲಿ ಜಾಹೀರಾತು ನೀಡಲು
ಈ ನಂಬರ್ ಗೆ ಸಂಪರ್ಕಿಸಿ
Phone Number : +91 9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button