Freedom TV
ಸಚಿವ ಜಮೀರ್ ಅಹಮ್ಮದ್ ಪ್ರಕಾರ ಪ್ರಧಾನಿ ಅಭ್ಯರ್ಥಿ ಇವರೇ …

ವಿಜಯನಗರ: ಕಾಂಗ್ರೆಸ್ ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮುಂದಿನ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಎಂದು ಸಚಿವ ಜಮೀರ್ ಅಹಮ್ಮದ್ ಹೇಳಿದ್ದಾರೆ.
ನಾವು ಇಪ್ಪತ್ತಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ತೆವೇ, ರಾಮುಲು ರಾಜಕೀಯ ಪುನರ್ಜನ್ಮ ಕೊಡಿ ಅಂತ ಕೇಳ್ತಿದಾರೆ ರಾಮುಲು ಸೋಲನ್ನು ಒಪ್ಪಿದ್ದಾರೆ ಅಂತಲೇ ಅರ್ಥ ಎರಡು ಲಕ್ಷ ಮತಗಳ ಅಂತರದಿಂದ ತುಕಾರಂ ಗೆಲ್ತಾರೆ ಎಂದರು.
ಬಳ್ಳಾರಿ ಜನ ಈ ಭಾರಿ ತಿರ್ಮಾನ ಮಾಡಿದ್ದಾರೆ. ನಾನು ಬೇರೆ ಬೇರೆ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೇನೆ, ಎಲ್ಲಾ ಜಿಲ್ಲೆಗಳಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಅಸೆಂಬ್ಲಿ ಚುನಾವಣೆ ವೇಳೆ 130 ಸೀಟು ಗೆಲ್ತಿವಿ ಅಂತ ಹೇಳಿದ್ದೇ ಅದರಂತೆ 136 ಸೀಟು ಕಾಂಗ್ರೆಸ್ ನಿಂದ ಗೆದ್ದಿದ್ದೆವೆ ಎಂದು ನುಡಿದರು.
ಲೋಕಸಭಾ ಚುನಾವಣೆ ವೇಳೆ ಕೂಡ ನಿರೀಕ್ಷೆ ಮೀರಿ ಫಲಿತಾಂಶ ಬರಲಿದೆ. ಕಾಂಗ್ರೆಸ್ ಪಕ್ಷ 23 ರಿಂದ 25 ಸೀಟು ಗೆದ್ದೆ ಗೆಲ್ಲುತ್ತದೆ ಎಂದು ಸಚಿವ ಜಮೀರ್ ಅಹಮ್ಮದ್ ಹೇಳಿದರು.




