ಡಿ ಬಾಸ್ ದರ್ಶನ್: ಕಾಟೇರಾ ಸಿನಿಮಾ ಮೂಲಕ ತನ್ನ ಮತ್ತೊಂದು ಸುತ್ತಿನ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದ್ರೆ ಇದೀಗ ಕಾಟೇರಾ ಸಿನಿಮಾ ಟಿಕೇಟ್ ಗಳೂ ಸೋಲ್ಡ್ ಔಟ್ ಆಗಿರೋದು, ಪ್ರೀ ಬುಕ್ಕಿಂಗ್ ಎಲ್ಲವನ್ನೂ ನೋಡಿದ್ರೆ ದರ್ಶನ್ ಗೆ ಕಾಟೇರಾ ಸಿನಿಮಾ ಮತ್ತೊಂದು ಇಮೇಜ್ ಕ್ರಿಯೇಟ್ ಮಾಡೋದ್ರಲ್ಲಿ ನೋ ಡೌಟ್.. ದರ್ಶನ್ ಗೆ ಅಚ್ಚೇ ದಿನ್ ಶುರು ಹೋಗಯಾ ಅಂತಿದ್ದಾರೆ ಆತನ ಅಭಿಮಾನಿಗಳು.

ಹೌದು..ಪರಭಾಷೆಯ ಸಿನಿಮಾಗಳಿಗೆ ಸೆಡ್ಡು ಹೊಡೆದು ಅಪ್ಪಟ ಕನ್ನಡ ಸಿನಿಮಾ ‘ಕಾಟೇರ’ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ನಾಲ್ಕು ದಿನಗಳ ಹಿಂದಷ್ಟೇ ‘ಕಾಟೇರ’ ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಿತ್ತು. ದರ್ಶನ್ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ಟಿಕೆಟ್ ಅನ್ನು ಖರೀದಿ ಮಾಡುತ್ತಿದ್ದಾರೆ. ಅಲ್ಲದೇ ಹೀಗಾಗಲೇ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ಬಹು ನಿರೀಕ್ಷಿತ ಕಾಟೇರಾ ಬಿಡುಗಡೆಗೂ ಮುನ್ನವೇ ಯಶಸ್ಸಿನ ಶಿಖರ ಏರಿದೆ.

ಜಸ್ಟ್ 4 ದಿನಗಳಲ್ಲಿ ‘ಕಾಟೇರ’ ಸಿನಿಮಾದ ಟಿಕೆಟ್‌ಗಳು ಕಡೆಲೆಪುರಿಯಂತೆ ಸೇಲ್ ಆಗಿವೆ. ಇಂದು ರಾತ್ರಿ ಸಿನಿಮಾ ಬಿಡುಗಡೆ ಆಗುತ್ತಿದ್ದು, ಕಾಟೇರನಾಗಿ ದರ್ಶನ್ ನೋಡಲು ಡಿ ಬಾಸ್ ಅಭಿಮಾನಿಗಳು ಅದಾಗಲೇ ಥಿಯೇಟರ್ ಗಳತ್ತ ಜಮಾಯಿಸಿದ್ರು.. ಇನ್ನು ಹೆಚ್ಚು ಹೆಚ್ಚು ಟಿಕೆಟ್‌ಗಳು ಖರೀದಿಯಾಗುವ ಸಾಧ್ಯತೆಯಿದೆ. ಕೇವಲ ಅಡ್ವಾನ್ಸ್ ಬುಕಿಂಗ್‌ನಿಂದಲೇ ದರ್ಶನ್ ಸಿನಿಮಾ 3 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಸದ್ಯ ‘ಕಾಟೇರ’ ತಂಡವೇ ನೀಡಿರುವ ಮಾಹಿತಿ ಪ್ರಕಾರ, ಕಳೆದ ನಾಲ್ಕು ದಿನಗಳಿಂದ ಸುಮಾರು 1 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟ ಆಗಿವೆ. ಬುಕ್ ಮೈ ಶೋ ಟಿಕೆಟ್ ಬುಕಿಂಗ್ ಆಪ್ ಮೂಲಕ ಕರ್ನಾಟಕದಾದ್ಯಂತ ಲಕ್ಷ ಟಿಕೆಟ್‌ಗಳು ಸೇಲ್ ಆಗಿವೆ. ಇನ್ನೂ ಕೆಲವು ಗಂಟೆಗಳು ಬಾಕಿ ಉಳಿದಿದ್ದು, ಟಿಕೆಟ್ ಗಳೆಲ್ಲಾ ಬಹುತೇಕ ಸೋಲ್ಡ್ ಔಟ್ ಆಗಿರೋದು ಲಾಭದತ್ತ ಕಾಟೇರಾ ಎನ್ನುವ ಸೂಚನೆ ನೀಡಿದೆ.

ಇನ್ನು ಟಿಕೇಟ್ ಸೋಲ್ಡ್ ಔಟ್ ಆದ ಬೆನ್ನಲ್ಲೇ ಕಾಟೇರಾ ಸಿನಿಮಾ ತಂಡ ಖುಷಿ ಖುಷಿಯಾಗಿ ರೋಮ್ಯಾಂಟಿಕ್ ಸಾಂಗ್ ಒಂದನ್ನ ರಿಲೀಸ್ ಮಾಡಿದೆ. ವಿ. ಹರಿಕೃಷ್ಣ ಸಂಗೀತ ನಿರ್ದೇಶಿಸಿದ್ದು, ವಾಣಿ ಹರಿಕೃಷ್ಣ ಈ ಹಾಡನ್ನು ಹಾಡಿದ್ದಾರೆ. ಈಗಾಗಲೇ ಯೂಟ್ಯೂಬ್‌ನಲ್ಲಿ “ಅನುರಾಗ ಕಲಿಸಲು..” ಅನ್ನೋ ರೊಮ್ಯಾಂಟಿಕ್ ಸಾಂಗ್‌ಗೆ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಸಿನಿಮಾ ತೆರೆ ಮೇಲೆ ಅಪ್ಪಳಿಸಲು ಕ್ಷಣಗಣನೆ ಆರಂಭವಾಗಿದ್ದು, ಅಭಿಮಾನಿಗಳ ಎದೆಯಲ್ಲಿ ಕಾತುರತೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ.

By admin

Leave a Reply

Your email address will not be published. Required fields are marked *

Verified by MonsterInsights