ಬೆಂಗಳೂರು: ವಿಶೇಷ ತಹಸೀಲ್ದಾರ್ ನಾಗರಾಜ್ ಅವರ ಮನೆಯ ಮೇಲೆ ಲೋಕಾಯುಕ್ತ ದಾಳಿಗೆ ಸಂಬಂಧಪಟ್ಟಂತೆ ಬೆಂಗಳೂರು ದಕ್ಷಿಣ ತಾಲೂಕು AC ರಜನೀಕಾಂತ್ಗೆ ಬುಲಾವ್ ನೀಡಿದೆ. ನೆನ್ನೆ ಇಡೀ ದಿನ ಲೋಕಾಯುಕ್ತ ವಿಚಾರಣೆಯನ್ನು ಎದುರಿಸಿದ ರಜನೀಕಾಂತ್ ವಿಶೇಷ ತಹಸೀಲ್ದಾರ್ ರವರ ಜೊತೆ ನಂಟಿತ್ತು ಎಂಬುದರ ಬಗ್ಗೆ ವಿವರಣೆಯನ್ನು ಈ ಸಂದರ್ಭದಲ್ಲಿ ನೀಡಿದ್ದಾರೆ. ಹಲವಾರು ವ್ಯವಹಾರಗಳಲ್ಲಿ ನಾಗರಾಜ್ ರವರ ಜೊತೆ ಸಂಬಂಧ ಹೊಂದಿದ್ದ ಬಗ್ಗೆ ವಿವರಗಳನ್ನು ಅವರು ನೀಡಿದ್ದಾರೆ. ಸುಂಕದಕಟ್ಟೆ, ಗೊಲ್ಲಹಳ್ಳಿಯ ಸರ್ವೇ ನಂಬರ್ಗಳ ಬಗ್ಗೆ ಲೋಕಾಯುಕ್ತರು ಕೇಳಿದ ಪ್ರಶ್ನೆಗಳಿಗೆ AC ರಜನೀಕಾಂತ್ ತಬ್ಬಿಬ್ಬುಗೊಂಡಿದ್ದಾರೆ. ಉಮೇಶ್ ಗೌಡರವರ ಮೂಲಕ ವ್ಯವಹಾರ ನಡೆಸುತ್ತಿದ್ದು, ಈ ಸಂಬಂಧ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.