ಕಲಬುರಗಿ: ದೇಶದಲ್ಲಿ ಹೆಚ್ಚಾಗಿ ಯುವಕರು ದಾರಿ ತಪ್ಪುತ್ತಿದ್ದಾರೆ. ಕಾಲೇಜಿನಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಬೇಕಿದೆ ಏನೇ ಆಗಿದ್ದರು ಇಂತಹ ಘಟನೆಗಳು ನಡೆಯಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ವಿದ್ಯಾರ್ಥಿನಿ ನೇಹಾ ಹೀರೆಮಠ್ ಕೊಲೆ ಪ್ರಕರಣ ಕುರಿತು ಮಾತನಾಡಿದ ಅವರು, ಸರ್ಕಾರದಿಂದ ಈಗಾಗಲೇ ಏನೆನು ಕಾನೂನು ಕ್ರಮ ಬೇಕು ಕೈಗೊಳ್ಳುತ್ತಿದ್ದಾರೆ. ಏನು ಶಿಕ್ಷೆ ನೀಡಬೇಕು ಅದು ನೀಡುವ ಕೆಲಸ ಮಾಡ್ತಿದ್ದಾರೆ. ಲವ್ ಜಿಹಾದ್ ಹುಬ್ಬಳ್ಳಿ ಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಬಣ್ಣ ಹಚ್ಚಬೇಡಿ ಇದು ಲವ್ ಜಿಹಾದ್ ಅಲ್ಲ, ಗೃಹಸಚಿವರು ಈಗಾಗಲೇ ಸ್ಪಷ್ಟನೇ ನೀಡಿದ್ದಾರೆ ಎಂದರು.
ಇದರ ಬಗ್ಗೆ ಹೆಚ್ಚು ಚರ್ಚೆ ಮಾಡುವುದು ಬೇಡ, ಇಂತಹ ಸಂಧರ್ಭದಲ್ಲಿ ರಾಜಕೀಯ ಮಾಡುವುದು ಸೂಕ್ತವಲ್ಲ, ನ್ಯಾಯ ಕಾನೂನಿಂದ ಸಿಗಬೇಕು, ಅದೇನು ಮಾಡಬೇಕು ಸರ್ಕಾರ ಮಾಡುತ್ತಿದೆ,ಒಂದು ಕುಟುಂಬದಲ್ಲಿ ಇಂತಹ ಘಟನೆ ನಡೆದಾಗ ಸಹಜವಾಗಿ ಬರುವ ಭಾವನಾತ್ಮಕ ಮಾತು ಎಬಿವಿಪಿ, ಆರ್.ಎಸ್ ಎಸ್ ನವರಿಗೆ ಇಂತಹ ಘಟನೆಯಲ್ಲಿ ಪ್ರತಿಭಟನೆ ಮಾಡಿ ರೂಡಿ ಇದೆ. ಎಲ್ಲಿ ರಾಜಕೀಯ ಲಾಭ ಪಡೆಯಬೇಕಾಗುತ್ತೆ ಅಲ್ಲಿ ಎಲ್ಲಾ ಪಡೆಯುತ್ತಾರೆ ಎಂದರು.


