ಧಾರವಾಡ: ರಾಜ್ಯದಲ್ಲಿ ಹೃದಯಾಘಾತದ ಮರಣ ಮೃದಂಗ ಮುಂದುವರಿದಿದೆ. ಹೃದಯಾಘಾತ ಪ್ರಕರಣ ಧಾರವಾಡ ಜಿಲ್ಲೆಗೂ ಕಾಲಿಟ್ಟಿದೆ. ಜಿಲ್ಲೆಯಲ್ಲಿ ಹೃದಯಘಾತದಿಂದ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಇತ್ತೀಚೆಗೆ ನವಲಗುಂದ ಸೇರಿ ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಹೃದಯಾಘಾತಕ್ಕೆ ಹಲವರು ಬಲಿಯಾಗಿದ್ದಾರೆ. ಇದೀಗ ಧಾರವಾಡದಲ್ಲಿ ಮತ್ತೋರ್ವ ಯುವತಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಧಾರವಾಡ ಪುರೋಹಿತ್ ನಗರದ ನಿವಾಸಿ ಜೀವಿತಾ ಕುಸಗೂರ (26) ಮೃತ ದುರ್ದೈವಿಯಾಗಿದ್ದಾರೆ.
ಜೀವಿತಾ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಮಂಗಳವಾರ (ಜು.8) ರಂದು ಮನೆಯಲ್ಲಿ ಜೀವಿತಾ ತಲೆ ಸುತ್ತು ಬಂದು ಸುಸ್ತಾಗಿ ಬಿದ್ದಿದ್ದಾಳೆ. ಕೂಡಲೇ ಅವರನ್ನು ಆಸ್ಪತ್ರೆ ಸಾಗಿಸುವ ಕೆಲಸ ಮಾಡಿದ್ರೂ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದಾಗ ಜೀವಿತಾ ಹೃದಯಾಘಾತದಿಂದಲೇ ಸಾವನ್ನಪ್ಪಿದ್ದು ಎಂಬುದು ದೃಢಪಟ್ಟಿದೆ. ಎಂಎಸ್ಸಿ ಅಗ್ರಿ ಮಾಡಿದ್ದ ಜೀವಿತಾ ಯುಪಿಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ತಂದೆ ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದು ಮಗಳು ಯುಪಿಎಸ್ಪಿ ಪರೀಕ್ಷೆ ಪಾಸ್ ಮಾಡಲಿ ಎಂದು ಕನಸು ಕಂಡಿದ್ರು. ಮಗಳ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


