ಪ್ರೀತಿಯ ವಿಚಾರಕ್ಕೆ ಯುವಕನನ್ನು ಬ್ಯಾಟ್‌ನಿಂದ ಥಳಿಸಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ..
ಜ್ಯೋತಿ ಶ್ರವಣ್ ಸಾಯಿ ಮೃತ ಯುವಕ.. ಶ್ರಮಣ್ ಮೈಸಮ್ಮ ಗುಡ್ಡದಲ್ಲಿರುವ ಸೆಂಟ್ ಪೀಟರ್ಸ್ ಎಂಜಿನಿಯರ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಓದುತ್ತಿದ್ದ. ಮಗಳನ್ನು ಪ್ರೀತಿಸಿದ್ದಕ್ಕೆ ಕೋಪಗೊಂಡ ಪೋಷಕರು, ಮದುವೆ ಮಾತುಕತೆಗೆಂದು ಮನೆಗೆ ಕರೆದು
ವಿದ್ಯಾರ್ಥಿಯನ್ನು ಬ್ಯಾಟ್‌ನಿಂದ ಥಳಿಸಿ ಕೊಲೆ ಮಾಡಿದ್ದಾರೆ..
ವಿದ್ಯಾರ್ಥಿಯ ಸಾವಿಗೆ ಕಾರಣವಾದ ಹಿಂಸಾತ್ಮಕ ದಾಳಿಗೂ ಮುನ್ನ ಯುವತಿಯ ಕುಟುಂಬ ಹಲವಾರು ಬಾರಿ ಎಚ್ಚರಿಕೆ ನೀಡಿತ್ತು, ಈ ಸಂಬಂಧಕ್ಕೆ ಅವರ ವಿರೋಧವಿತ್ತು. ಈ ಬಗ್ಗೆ ಮಾಹಿತಿ ನೀಡಿದ ಅಮೀನ್‌ಪುರ ಸರ್ಕಲ್ ಇನ್ಸ್‌ಪೆಕ್ಟರ್ ನರೇಶ್ ನೀಡಿರುವ ಮಾಹಿತಿಯ ಪ್ರಕಾರ, ಶ್ರವಣ್ ಬೀರಮ್‌ಗುಡದ ಇಸುಕಬಾವಿ ನಿವಾಸಿ 19 ವರ್ಷದ ಶ್ರೀಜಾ ಜೊತೆ ಸಂಬಂಧ ಹೊಂದಿದ್ದ. ಅವರ ಸಂಬಂಧಕ್ಕೆ ಶ್ರೀಜಾ ಅವರ ಕುಟುಂಬದಿಂದ ವಿರೋಧವಿತ್ತು. ಈ ಹಿಂದೆ ಅವರು ಹುಡುಗನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೆ ಪ್ರೇಮಿಗಳು ತಮ್ಮ ಪ್ರೀತಿಯ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.
ಹೀಗಾಗಿ ಶ್ರೀಜಾಳ ಪೋಷಕರು ಶ್ರವಣ್ನನ್ನು ಮದುವೆಯ ಬಗ್ಗೆ ಚರ್ಚಿಸಬೇಕು ಬಾ ಎಂದು ಮನೆಗೆ ಕರೆಸಿಕೊಂಡು, ಶ್ರವಣ್ ಮೇಲೆ ಹಠಾತ್ತನೆ ಹಲ್ಲೆ ನಡೆಸಿ ಕ್ರಿಕೆಟ್ ಬ್ಯಾಟ್‌ನಿಂದ ತೀವ್ರವಾಗಿ ಹೊಡೆದಿದ್ದಾರೆ. ಆತನ ತಲೆಗೆ ಗಾಯಗಳಾಗಿದ್ದು, ಕಾಲು ಮತ್ತು ಪಕ್ಕೆಲುಬುಗಳಿಗೆ ಮುರಿತಗಳಾಗಿತ್ತು. ನಂತರ ಅವನನ್ನು ಕುಕತ್ಪಲ್ಲಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದ. ಅಮೀನ್‌ಪುರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿಯ ಹಿಂದಿನ ನಿಖರವಾದ ಉದ್ದೇಶದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.


