ಹುಬ್ಬಳ್ಳಿ : ಕ್ಷುಲಕ‌ ಕಾರಣಕ್ಕೆ ಯುವಕನೊಬ್ಬನಿಗೆ ಪುಡಿ ರೌಡಿಗಳು ಮನೆಯೊಂದರಲ್ಲಿ ಕೂಡಿ ಹಾಕಿ, ಮನಬಂದಂತೆ ಥಳಿಸಿದ ಅಮಾನವೀಯ ಘಟನೆ ಹುಬ್ಬಳ್ಳಿಯ ವಿದ್ಯನಗರದಲ್ಲಿ ಕಳೆದ ಸೋಮವಾರ ತಡರಾತ್ರಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿವಿನ ರಿಚರ್ಡ್ ಎಂಬಾತನೇ ಹಲ್ಲೆಗಪಳಗಾದ ಯುವಕನಾಗಿದ್ದಾನೆ. ಪುಡಿ ರೌಡಿಗಳಾದ ವಿಜಯ ಬಿಜವಾಡ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ‌ಕೇಳಿ ಬಂದಿದೆ.

ಕಳೆದ ಜ.15 ರ ಮಧ್ಯರಾತ್ರಿ ಎರಡೂ ಗಂಟೆಗೆ ಪುಡಿ ರೌಡಿಗಳಾದ ವಿಜಯ ಬಿಜವಾಡ ಹಾಗೂ ಸಹಚರರು ಊಟಕ್ಕೆ ತೆರಳಿದ್ದರು. ಅದೇ ಸಮಯದಲ್ಲಿ ಹೋಟೆಲ್ ಹೊರಗಡೆ ವಿವಿನ ಜೊತೆಗೆ ಸಿಗರೇಟ್ ವಿಚಾರವಾಗಿ ಜಗಳ ಆರಂಭಿಸಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ವಿಜಯ ಬಿಜವಾಡ್ ಮತು ಆತನ ಮೂರು ಜನ‌ ಸಂಗಡಿಗರು ವಿವಿನ ರಿಚರ್ಡ್ ಮೇಲೆ ಹಲ್ಲೆ ನಡೆಸಿ, ತನ್ನ ಕಾರಿನಲ್ಲಿಯೇ ವಿವಿನ್ ರೀಚರ್ಡ್‌ನನ್ನ ಹತ್ತಿಸಿಕೊಂಡು ಹೋಗಿ ಮನೆಯಲ್ಲಿ ಕೂಡಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಮನೆಯಲ್ಲೇ ಕಲ್ಲಿನಿಂದ ರಾಕ್ಷಸ ಕೃತ್ಯ ಎಸಗಿದ್ದಾರೆ.

ವಿವಿನ್ ರೀಚರ್ಡ್‌ ತಲೆಗೆ, ಮುಖಕ್ಕೆ, ಬೆನ್ನಿಗೆ, ಹೊಟ್ಟೆಗೆ ಗಂಭೀರ ಗಾಯಗಳಾಗಿದ್ದು, ಹಲ್ಲೆಗೊಳಗಾದ ವಿವಿನ್ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ವಿವಿನ್ ದೂರು ದಾಖಲಿಸಿದ್ದಾರೆ. ದೂರು ದಾಖಲಾಗಿ ಎರಡು ದಿನಗಳಾದ್ರೂ ಪುಡಿರೌಡಿಗಳನ್ನು ಬಂಧನ ಮಾತ್ರ ಇನ್ನೂ ಆಗಿಲ್ಲ.

By admin

Leave a Reply

Your email address will not be published. Required fields are marked *

Verified by MonsterInsights