ಜಿಲ್ಲೆ

ಜಗಳ ಬಿಡಿಸಲು ಬಂದ ಮಹಿಳೆ ಕೊಲೆ ಆರೋಪಿ ಆಲ್ವಿನ್ ಗೆ ಜೀವಾವಧಿ ಶಿಕ್ಷೆ..!

ಮೈಸೂರು : ಜಗಳ ಬಿಡಿಸಲು ಬಂದ ಪಕ್ಕದ ಮನೆ ಮಹಿಳೆ ಕೊಲೆ ಪ್ರಕರಣ ಅಪರಾಧಿಗೆ ಮೈಸೂರು ಜಿಲ್ಳಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣ ಆರೋಪಿ ಆಲ್ವಿನ್ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಯಾಗಿದ್ದು, 50 ಸಾವಿರ ರೂಪಾಯಿ ದಂಡ ಕೂಡ ವಿಧಿಸಲಾಗಿದೆ.

ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಅಪರಾಧಿ ಆಲ್ವಿನ್ 2020ರ ಅಕ್ಟೋಬರ್ 17 ರಂದು ತನ್ನ ಪತ್ನಿಯ ಜೊತೆ ಜಗಳವಾಡುತ್ತಿದ್ದನು. ಈ ವೇಳೆ ಪಕ್ಕದ ಮನೆಯ ಮಹಿಳೆ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ್ದರು. ಇದರಿಂದ ಇನ್ನಷ್ಟು ಆಕ್ರೋಶಗೊಂಡ ಆಲ್ವಿನ್, ಆ ಮಹಿಳೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದನು. ಪ್ರಕರಣ ಸಂಬಂಧ ಠಾಣಾ ಇನ್ಸ್ ಪೆಕ್ಟರ್ ಸುರೇಶ್ ಅವರು, ತನಿಖೆ ನಡೆಸಿ ಸಾಕ್ಷಿ ಸಮೇತ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕರಾದ ಹೆಚ್.ಇ. ಚಿನ್ನಪ್ಪ ಮತ್ತು ಶ್ರೀಮತಿ ರಂಜನಾರಾವ್‌ ಅವರು ವಾದ ಮಂಡಿಸಿದ್ದರು.

Comments (0)

Your email address will not be published. Required fields are marked *

Back to top button