ಮೊಳಕಾಲ್ಮುರು : ಕುಡಿಯುವ ನೀರು ಕೇಳಿದ ವ್ಯಕ್ತಿಯನ್ನು ಗ್ರಾಮ ಪಂಚಾಯಿತಿಯ ವಾಟರ್ ಮ್ಯಾನ್ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಗುಂಡ್ಲುರು ಗ್ರಾಮದಲ್ಲಿ ಗುರುವಾರದಂದು ನಡೆದಿದೆ.
ನಮ್ಮ ಕಡೆ ನೀರು ಬಿಡಿ ಎಂದು ಕೇಳಿದ ಇದೇ ಗ್ರಾಮದ ಮಹಾಂತೇಶ್ (55)ಮೇಲೆ ಗ್ರಾಮ ಪಂಚಾಯಿತಿ ವಾಟರ್ ಮ್ಯಾನ್ ಉಜ್ಜಯಿಮೂರ್ತಿ ಎಂಬ ಆರೋಪಿಯು ಜಾತಿ ನಿಂದನೆ ಮಾಡಿ ಕೈಯಲ್ಲಿದ್ದ ವಾಲ್ ಅನ್ನು ತಿರುಗಿಸುವ ಕಬ್ಬಿಣದ ರಾಡ್ ನಿಂದ ಮಹಾಂತೇಶ್ ರವರ ಎದೆಗೆ ಒಡೆದ ಪರಿಣಾಮ ಮಹಾಂತೇಶ ಮೃತಪಟ್ಟಿದ್ದಾರೆ. ದಲಿತ ವ್ಯಕ್ತಿ ನೀರು ಕೇಳಿದ್ದ ಎನ್ನುವ ಕಾರಣಕ್ಕೆ ವಾಟರ್ ಮ್ಯಾನ್ ನಿರಗಂಟಿ ಎದೆಗೆ ಒಡೆದು ಕೊಲೆಗೈದಿದ್ದಾನೆ ಎಂದು ದಲಿತ ಸಂಘಟನೆಗಳು ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ನೀರಗಂಟಿ ಉಜ್ಜಿನಿಮೂರ್ತಿ ಮೇಲೆ ಜಾತಿ ನಿಂದನೆ ಮತ್ತು ಕೊಲೆ ಕೇಸ್ ದಾಖಲಾಗಿದೆ. ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯನ್ನು ಮೊಳಕಾಲ್ಮುರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು ನಿನ್ನೆಯಷ್ಟೇ ಮೃತನ ಅಂತ್ಯಕ್ರಿಯೆ ನಡೆಸಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊಳಕಾಲ್ಮುರುಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.