ಲೋಕ ಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಪಕ್ಷಗಳು ಭಾರಿ ಜಾಗ್ರತೆಯಿಂದ ಹೆಜ್ಜೆ ಇಡುತ್ತಿದೆ,ಪುತ್ತೂರು ಕ್ಷೇತ್ರದಲ್ಲಿ ಕಟ್ಟರ್ ಹಿಂದುತ್ವವಾದಿ ಮತ್ತು ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಅರುಣ್‌ಕುಮಾರ್ ಪುತ್ತಿಲ ಅವರ ಬಂಡಾಯದ ಪರಿಣಾಮ ಬಿಜೆಪಿ ನಿದ್ದೆಗೆಟ್ಟಿದೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದ ಪುತ್ತಿಲ ಟಿಕೆಟ್ ಸಿಗದ ಬಳಿಕ ಬಿಜೆಪಿ ನಾಯಕರ ಯಾವ ಮನವೊಲಿಕೆಗೂ ಜಗ್ಗದೆ ಬಂಡಾಯದ ಬಾವುಟ ಹಾರಿಸಿ ಸ್ವತಂತ್ರವಾಗಿ ಸ್ಪರ್ಧಿಸಲು ಕಣಕ್ಕಿಳಿದು ,ಬಿಜೆಪಿ ಅಭ್ಯರ್ಥಿಯ ಸೋಲಿಗೆ ಕಾರಣವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಿಕೊಟ್ಟರು.
ಬಿಜೆಪಿಯ ಪರಂಪರಾಗತ ಬೆಂಬಲಿಗರಾದ ಬ್ರಾಹ್ಮಣರು ಕೂಡ ಈ ಸಲ ಪುತ್ತಿಲ ಬೆಂಬಲಕ್ಕೆ ನಿಂತಿದ್ದಾರೆ. ಸಮುದಾಯದ ಅಭ್ಯರ್ಥಿ ಎನ್ನುವುದು ಒಂದು ಕಾರಣವಾದರೆ ನಳಿನ್ ಸದ್ದಡಗಿಸಬೇಕೆನ್ನುವುದು ಇನ್ನೊಂದು ಕಾರಣ. ಪುತ್ತೂರಿನಲ್ಲಿ ಬಿಗಿ ಹಿಡಿತ ಹೊಂದಿರುವ ಆರ್‌ಎಸ್‌ಎಸ್ ಕೂಡ ಈ ಬಾರಿ ಅಲ್ಲಿ ಏನೂ ಮಾಡಲಾಗದೆ ಕೈಕಟ್ಟಿ ನೋಡುವಂತಾಗಿದೆ. ಕಲ್ಲಡ್ಕ ಪ್ರಭಾಕರ ಭಟ್ ಅವರಂಥ ಹಿರಿಯರ ಮಾತಿಗೂ ಅರುಣ್ ಕುಮಾರ್ ಪುತ್ತಿಲ ಸೊಪ್ಪು ಹಾಕಲಿಲ್ಲ ಅನ್ನೋದು ಸಂಘ ಪರಿವಾರಕ್ಕೆ ಪುತ್ತಿಲ ಪರಿವಾರ ಮುಳ್ಳಾಗಿರೋದನ್ನ ಸಾಕ್ಷೀಕರಿಸುತ್ತದೆ .
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಯಾರ್ಯಾರು..?
ಬಿಜೆಪಿಯಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಂತಿಮಗೊಂಡಂತೆ ಕಾಣುತ್ತಿಲ್ಲ. ಈ ಹಿಂದೆ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರೇ ಮುಂದಿನ ಲೋಕಸಭಾ ಅಭ್ಯರ್ಥಿ ಎಂದಿದ್ದರು. ಮುಂದಿನ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಳಿನ್ ಕುಮಾರ್ ಕಟೀಲ್ ಗೆಲ್ಲಿಸುವ ಕೆಲಸ ಮಾಡಬೇಕಿದೆ ಎಂದಿದ್ದರು. ಆದರೆ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿಯವರಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನೂ ರಾಜಕೀಯ ಮೂಲಗಳಿಂದ ಕೇಳಿಬರುತ್ತಿರುವ ಹೆಸರು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರಾ ಸೀತಾರಾಮನ್ ಎಂಬ ಚರ್ಚೆ ಜೋರಾಗಿದೆ. ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಹೈಕಮಾಂಡ್ ಬಿಗ್ ಪ್ಲಾನ್ ಮಾಡುತ್ತಿದ್ದು, ಕೇಂದ್ರ ಸಚಿವರನ್ನ ಚುನಾವಣಾ ಕಣಕ್ಕೆ ಇಳಿಸುವುದರ ಹಿಂದೆಯೂ ರಣತಂತ್ರ ಅಡಗಿದೆ ಅನ್ನೋದು ಸುಳ್ಳಲ್ಲ.
ಒಟ್ಟಾರೆ ಹಿಂದುತ್ವದ ಹೆಸರಲ್ಲಿ ಮಾತ್ರ ಗೆಲ್ಲಲು ಅವಕಾಶವಿರೋ ದಕ್ಷಿಣ ಕನ್ನಡದಲ್ಲಿ ಪುತ್ತಿಲ ಪರಿವಾರವೇ ಹೆಚ್ಚು ಜನರನ್ನ ವಿಶ್ವಾಸಕ್ಕೆ ಪಡೆದುಕೊಂಡಿರುವುದು ರಹಸ್ಯವಾಗಿ ಉಳಿದಿಲ್ಲ ,ಪಕ್ಷೇತ್ರವಾಗಿ ನಿಂತು ಮತ್ತೆ ಬಿಜೆಪಿಗೇ ಕಂಟಕರಾಗ್ತರಾ ಕಾದು ನೋಡಬೇಕಿದೆ.