ಹೌದು..ಏಷ್ಯಾದ ದೊಡ್ಡ ಸೋಲಾರ್ ಕಂಒನಿ ಇರೋದು ತುಮಕೂರು ಜಿಲ್ಲೆಯ ಪಾವಾಗಡ ತಾಲೂಕಿನಲ್ಲಿ. ಇಡೀ ಏಷ್ಯಾಗೆ ದೊಡ್ಡ ಸೋಲಾರ್ ಘಟಕ ಅಂತ ಕರೆಸಿಕೊಂಡಿರುವ ಇಲ್ಲೀಗ ಕಂದಾಯ ಕದಿಯುವ ಕಳ್ಳಾಟ ಶುರುವಾಗಿದೆ. ಹೌದು ದಶಕಗಳಿಂದ ಒಂದು ಕೋಟಿ ರೂಪಾಯಿಯನ್ನೂ ಕಟ್ಟಿಲ್ಲ ಎಂಬ ಸತ್ಯ ಬಯಲಾಗಿದೆ. ತುಮಕೂರು ಜಿಲ್ಲೆಯ ಗಡಿನಾಡು ಪಾವಗಡ ತಾಲೂಕಿನಲ್ಲಿರುವ ಸೌರ ವಿದ್ಯುತ್ ಘಟಕಕ್ಕೆ ಸಂಬಂಧಿಸಿದಂತಹ ಖಾಸಗಿ ಕಂಪನಿಗಳು ಕಂದಾಯ ಕಟ್ಟದೆ ಉಳಿಸಿಕೊಂಡಿದ್ದಾರೆ.
ವಳ್ಳೂರು, ತಿರುಮಣಿ, ನಾಗಲಮಡಿಕೆ, ವೆಂಕಟಾಪುರ ಪಂಚಾಯ್ತಿಯ ವ್ಯಾಪ್ತಿಯಲ್ಲಿರುವ 10ಕ್ಕೂ ಹೆಚ್ಚು ಸೋಲಾರ್ ಕಂಪನಿಗಳು ಕಂದಾಯ ಕಟ್ಟದೇ ಇದ್ದರೂ ಅದ್ಯಾಕೋ ಪಂಚಾಯ್ತಿ ಪಿಡಿಓಗಳು ಜಾಣ ಮೌನಕ್ಕೆ ಶರಣಾಗಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಮ್ ಆದ್ಮಿ ಹೋರಾಟದ ಎಚ್ಚರಿಕೆಯನ್ನ ನೀಡಿದೆ. ಕಂದಾಯ ವಸೂಲಿ ಮಾಡಿ ಆ ಹಣದಲ್ಲಿ ಗ್ರಾಮದ ಅಭಿವೃದ್ದಿ ಮಾಡಬೇಕಿದೆ. ಆದ್ರೆ ಹತ್ತು ವರ್ಷದಿಂದ ಕಂದಾಯ ಕಟ್ಟದೇ ಇದ್ರೂ ಯಾವ ಕ್ರಮ ಕೈಗೊಂಡಿಲ್ಲ ಅನ್ನೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಮಾಂಜಿನಪ್ಪ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಬಾಕಿ ಇರುವ ಕಂದಾಯ ವಸೂಲಿ ಮಾಡದಿದ್ದರೆ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ.


