ಅಯೋಧ್ಯೆಯಲ್ಲಿ ರಾಮಲಾಲ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.ಇಡೀ ದೇಶದಲ್ಲಿ ಹಬ್ಬದ ವಾತಾವರಣ , ಎಲ್ಲೆಲ್ಲೂ ರಾಮನಾಮ ಜಪ. ಇನ್ನೇನು ಕೆಲ ದಿನಗಳಷ್ಟೇ ರಾಮನನ್ನು ಕಣ್ಣು ತುಂಬಿಕೊಳ್ಳಲು , ವಿವಿಧ ರಾಜ್ಯಗಳಿಂದ ಅಯೋಧ್ಯೆಯತ್ತ ಭಕ್ತರ ಉಡುಗೊರೆಗಳ ಮಹಾಪೂರವೇ ಹರಿದು ಬರುತ್ತಿದೆ. ಹಾಗೆ ಇತ್ತ ಬೆಂಗಳೂರಿನ ಹೂಡಿಯ ರಾಮಭಕ್ತರು ಬೆಳ್ಳಿಯ ಇಟ್ಟಿಗೆ ರಾಮನಿಗೆ ಸರ್ಮಪಿಸಲು ಮುಂದಾಗಿದ್ದಾರೆ . ಈ ಬಗ್ಗೆ ಒಂದು ಸ್ಟೋರಿ ಇದೆ ನೋಡಿ .

ಎಸ್ . ಹೀಗೆ ವಿಘ್ನ ವಿನಾಶಕನ ಮಂದಿರದಲ್ಲಿ ಅಯೋಧ್ಯೆಯ ರಾಮಮಂದಿರಕ್ಕೆ ಅರ್ಪಿಸಲು ಸಿದ್ಧಪಡಿಸಿರುವ ಬೆಳ್ಳಿ ಇಟ್ಟಿಗೆಗೆ ಪೂಜೆ ಸಲ್ಲಿಸುತ್ತಿರುವ ರಾಮಭಕ್ತರು .ಎಲ್ಲರ ಮುಖದಲ್ಲೂ ಸಂತೋಷ , ಪ್ರತಿಯೊಬ್ಬರು ರಾಮನ ಸ್ಮರಣೆಯಲ್ಲಿ ಜನವರಿ 22 ಎಂದು ಬರುತ್ತದೋ ಎಂಬ ಕಾತುರ . ಈ ವೈಭವದ ದೃಶ್ಯಾವಳಿಗಳು ಕಂಡುಬಂದಿದ್ದು ಬೆಂಗಳೂರಿನ ಹೂಡಿಯಲ್ಲಿ . 2019ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇ ಬೇಕೆಂದು ಹೂಡಿಯಿಂದ ಪಾದಯಾತ್ರೆ ಮೂಲಕ ತಲೆ ಮೇಲೆ ಇಟ್ಟಿಗೆ ಹೊಟ್ಟು ಹೊರಟ ರಾಮಭಕ್ತ ಮಂಜುನಾಥ್ ಹಾಗೂ 12 ಜನ ತಂಡದವರಿಂದ ಈ ಒಂದು ಮಹತ್ತರ ಕಾರ್ಯಕ್ಕೆ ಕೈ ಹಾಕಲಾಗಿದೆ .

ಇನ್ನು ರಾಮನ ಭಕ್ತಿ ಆಚಲ ಶಕ್ತಿ ಎಂಬ ಮಾತಿಗೆ ಋಣಿಯಾದವರು ಇವರು . ಕೈಗೊಂಡಿದ ಪಾದಯಾತ್ರೆಯಲ್ಲಿ ಹಲವು ಅಡಚಣೆಗಳು ಬಂದರೂ ಮುನ್ನುಗ್ಗಿ ಕೈಗೊಂಡ ಯಾತ್ರೆಯನ್ನು ಸಂಪೂರ್ಣಗೊಳಿಸಿ ಹಿಂದಿರುಗಿದ 18 ದಿನಕ್ಕೆ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಅಸ್ತು ಎಂದಿತ್ತು .2020 ರಲ್ಲಿ ಭೂಮಿ ಪೂಜೆ , 2024ರ ಜನವರಿ 22ಕ್ಕೆ ಮಂದಿರ ಉದ್ಘಾಟನೆಗೆ ಸಿದ್ಧವಾಗುತ್ತಿದೆ . ಈ ಸಂತೋಷದ ಶುಭಗಳಿಗೆಯಲ್ಲಿ ನಾವು , ನಮ್ಮವರೆಲ್ಲರೂ ಭಾಗಿಯಾಗಬೇಕೆಂದು ತೀರ್ಮಾನಿಸಿ ಹೂಡಿ ಗ್ರಾಮ ಹಾಗೂ ಸುತ್ತಮುತ್ತಲಿನ ಊರಿನ ಜನರ ಸಹಕಾರದಲ್ಲಿ ಹಣ ಸಂಗ್ರಹಿಸಿ 2 ಕೆಜಿ ತೂಕದ ಬರೋಬ್ಬರಿ 1 ಲಕ್ಷ 84 ಸಾವಿರ ಮೌಲ್ಯದ ಬೆಳ್ಳಿ ಇಟ್ಟಿಗೆ ನೀಡಲು ರಾಮನೂರಿಗೆ ಪ್ರಯಾಣ ಬೆಳೆಸಿದ್ದಾರೆ.

ಒಟ್ನಲ್ಲಿ ದೃಢಸಂಕಲ್ಪ, ನಿಷ್ಕಲ್ಮಶ ಭಕ್ತಿಗೆ ಎಲ್ಲವೂ ಸಾಧ್ಯ ಎಂಬ ಮಾತಿಗೆ ಈ ರಾಮಭಕ್ತರ ತಂಡ ಸಾಕ್ಷಿಯಾಗಿದ್ದು ,ರಾಮನಿಗೆ ಅರ್ಪಿಸಲು ಬೆಳ್ಳಿ ಇಟ್ಟಿಗೆ ಸಮೇತ ಅಯೋಧ್ಯೆಗೆ ಪ್ರಯಾಣ ನಡೆಸಿದ್ದಾರೆ. ಅವರ ಪ್ರಯಾಣ ಸುಖಕರವಾಗಿರಲಿ ಭಕ್ತರ ಪ್ರೀತಿಯ ಉಡುಗೊರೆ ಆ ರಾಮನ ಮಂದಿರದಲ್ಲಿ ಕಾಣಸಿಗಲ್ಲಿ ಎಂದು ಆಶಿಸೋಣ.


