Tuesday, April 29, 2025
30.4 C
Bengaluru
LIVE
ಮನೆ#Exclusive NewsTop NewsViral Video: 12 ದೈತ್ಯ ರೋಬೋಟ್ ಗಳನ್ನು ಅಪಹರಿಸಿದ ಖತರ್ನಾಕ್ ಪುಟಾಣಿ ರೋಬೋಟ್

Viral Video: 12 ದೈತ್ಯ ರೋಬೋಟ್ ಗಳನ್ನು ಅಪಹರಿಸಿದ ಖತರ್ನಾಕ್ ಪುಟಾಣಿ ರೋಬೋಟ್

ಬೀಜಿಂಗ್: ಸಾಮಾನ್ಯವಾಗಿ ಅಪಹರಣಕಾರರು ಮಕ್ಕಳು, ಮಹಿಳೆಯರು, ಪ್ರಾಣಿಗಳನ್ನು ಕಿಡ್ನಾಪ್ ಮಾಡುವ ಸುದ್ದಿಗಳನ್ನ ಕೇಳೇ ಇರುತ್ತೀರಿ. ಆದ್ರೆ, ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಪುಟಾಣಿ ರೋಬೋಟ್ ಒಂದು 12 ದೈತ್ಯ ರೋಬೋಟ್ ಗಳನ್ನು ಅಪಹರಣ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದೆ. ದೈತ್ಯ ರೋಬೋಟ್ ಗಳನ್ನು ಪುಟಾಣಿ ರೋಬೋಟ್ ಕಿಡ್ನಾಪ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

LaikCumhuriyett ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ರಾತ್ರಿ ವೇಳೆ ಶೋ ರೂಮ್ ಒಂದಕ್ಕೆ ನುಗ್ಗಿದ್ದ ಪುಟಾಣಿ AI ರೋಬೋಟ್ ಅಲ್ಲಿದ್ದ ಇತರೆ 12 ದೈತ್ಯ ರೋಬೋಟ್ಗಳನ್ನು ಮನೆಗೆ ಬನ್ನಿ ಎಂದು ಮನವೊಲಿಸಿ ಕಿಡ್ನಾಪ್ ಮಾಡುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಈ ಅಪಹರಣದ ಶಾಕಿಂಗ್ ದೃಶ್ಯ ನೋಡಿ ಜನ ಫುಲ್ ಶಾಕ್ ಆಗಿದ್ದಾರೆ.

ವರದಿಗಳ ಪ್ರಕಾರ ಹ್ಯಾಂಗ್ ಝೌ ಕಂಪನಿಯ ಇರ್ಬೈ ಹೆಸರಿನ AI ಚಾಲಿತ ರೋಬೋಟ್‌ ಶಾಂಘೈ ರೋಬೋಟಿಕ್ಸ್ ಕಂಪನಿಯ ಶೋ ರೂಮ್ ಗೆ ಬಂದು ಅಲ್ಲಿದ್ದ 12 ದೊಡ್ಡ ರೋಬೋಟ್ ಗಳ ಜೊತೆ ಮಾನವರಂತೆ ಸಂವಹನ ನಡೆಸಿ ಅವುಗಳನ್ನು ಕಿಡ್ನಾಪ್ ಮಾಡಿದೆ. AI ಚಾಲಿತ ರೋಬೋಟ್ ಇರ್ಬೈ ಜೊತೆ ಮಾತನಾಡಿದ ಇತರೆ ರೋಬೋಟ್‌ಗಳು ನಮಗೆ ರಜೆ ಇಲ್ಲ. ಹಾಗಾಗಿ ನಮಗೆ ಮನೆಗೆ ಕೂಡ ಹೋಗಲು ಆಗುತ್ತಿಲ್ಲ ಎಂದು ತಿಳಿಸಿವೆ. ಹಾಗಾದ್ರೆ ನೀವು ನನ್ನೊಂದಿಗೆ ನಮ್ಮ ಮನೆಗೆ ಬನ್ನಿ ಎಂದು ಮನವೊಲಿಸಿ AI ಚಾಲಿತ ಇರ್ಬೈ ರೋಬೋಟ್ ಅಲ್ಲಿದ್ದ 12 ದೈತ್ಯ ರೋಬೋಟ್‌ಗಳನ್ನು ಅಪಹರಣ ಮಾಡಿದೆ. ಶೋ ರೂಮ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ರೋಬೋಟ್‌ಗಳ ನಡುವಿನ ಸಂಭಾಷಣೆ ಕೂಡ ರೆಕಾರ್ಡ್‌ ಆಗಿದೆ.

ಆರಂಭದಲ್ಲಿ ಇದೊಂದು ನಕಲಿ ವಿಡಿಯೋ ಎಂದು ಹೇಳಲಾಗುತ್ತಿತ್ತು. ಆದರೆ ನಂತರ 12 ದೈತ್ಯ ರೋಬೋಟ್ ಗಳ ಹೈಜಾಕ್ ಘಟನೆಯನ್ನು ಹ್ಯಾಂಗ್ ಝೌ ಹಾಗೂ ಶಾಂಘೈ ರೋಬೋಟಿಕ್ಸ್ ಕಂಪನಿ ದೃಢಪಡಿಸಿವೆ. ಇದೀಗ ಈ ಅಪಹರಣದ ಘಟನೆಯು AI ವ್ಯವಸ್ಥೆಯ ಸುರಕ್ಷತೆ ಮತ್ತು ಸಂಭಾವ್ಯ ಅಪಾಯಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟು ಹಾಕಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments