ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ಭಾನುವಾರ ಕಾಡಾನೆಯೆದುರು ಸೆಲ್ಫಿ ಫೋಟೋ ತೆಗೆದು,ವಿಡಿಯೋ ಮಾಡುತ್ತಿದ್ದ ವೇಳೆ ಆನೆ ದಾಳಿಗೆ ಒಳಗಾದ ವ್ಯಕ್ತಿಯನ್ನು ಗುರುತಿಸಿ ಅರಣ್ಯ ಇಲಾಖೆ ದಂಡ ವಿಧಿಸಿದೆ.
ನಂಜನಗೂಡಿನ ನಿವಾಸಿ ಆರ್. ಬಸವರಾಜು ಕಾಡಾನೆ ದಾಳಿಗೊಳಗಾಗಿ ಅದೃಷ್ಟವಶಾತ್ ಪಾರಾಗಿದ್ದ. ಇತನನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆ ಸಿಬ್ಬಂದಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಮಾಹಿತಿ ಕೊರತೆಯಿಂದ ಉದ್ಧಟತನ ಎಸಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆತನ ಬಳಿಯಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ಪೊಲೀಸರು 25 ಸಾವಿರ ದಂಡ ವಿಧಿಸಿದ್ದಾರೆ.


