ತುಮಕೂರು: ಗೋಧಿ ತುಂಬಿದ್ದ ಲಾರಿ ಪಲ್ಟಿಯಾದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹುಯಿಲುದೊರೆ ಗ್ರಾಮದಲ್ಲಿ ನಡೆದಿದೆ..
ಗೋಧಿ ತುಂಬಿದ್ದ ಲಾರಿ ಎದುರಿಗೆ ಬರುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ತುಂಬ ಗೋಧಿ ಚೆಲ್ಲಿದೆ. ಗೋಧಿ ತುಂಬಿಕೊಳ್ಳಲು ಸ್ಥಳೀಯರು ಮುಗಿಬಿದ್ದಿದ್ದಾರೆ.. ಶಿರಾದಿಂದ ಹುಳಿಯಾರು ಕಡೆಗೆ ಬರುತ್ತಿದ್ದ ಗೋಧಿ ತುಂಬಿದ್ದ ಲಾರಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.


