ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಗುತ್ತಿಗನೂರು ಎಂಬ ಗ್ರಾಮದ ಬಳಿ ಲಾರಿಯೊಂದು ಅಗ್ನಿಗಾಹುತಿಯಾಗಿದೆ. ಗುತ್ತಿಗೆನೂರಿನಿಂದ ಬಾಗಲಕೋಟೆಗೆ ತೆರಳುತ್ತಿದ್ದ ಲಾರಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇದಕ್ಕೆ ಕಾರಣ ಮೇವು ತುಂಬಿದ ಲಾರಿಗೆ ವಿದ್ಯುತ್ ತಂತಿ ತಗುಲಿದೆ. ತಕ್ಷಣ ಮೇವಿಗೆ ಬೆಂಕಿ ಹೊತ್ತಿಕೊಂಡಿದೆ. ಭತ್ತದ ಹುಲ್ಲು ಒಣಗಿದ್ದ ಕಾರಣ ಬೆಂಕಿ ಬಲು ಬೇಗನೆ ವ್ಯಾಪಿಸಿದೆ.

ಲಾರಿಯಲ್ಲಿದ್ದ ಭತ್ತದ ಹುಲ್ಲಿಗೆ ಬೆಂಕಿ ಹೊತ್ತಿರೋದನ್ನ ಗಮನಿಸಿದ ಚಾಲಕ ತಕ್ಷಣ ಲಾರಿಯನ್ನ ಊರಿನ ಹೊರಗಡೆ ಚಲಾಯಿಸಿಕೊಂಡು ಹೋಗಿದ್ದಾನೆ. ಲಾರಿ ಚಾಲಕನ ಸಮಯಪ್ರಜ್ಞೆಯಿಂದಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಲಾರಿ ಹಾಗೂ ಲಾರಿಯಲ್ಲಿದ್ದ ಮೇವು ಸಂಪೂರ್ಣ ಅಗ್ನಿಗೆ ಆಹುತಿಯಾಗಿದ್ದು ಸುದ್ದಿ ತಿಳಿಯುತ್ತಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ.