ತುಮಕೂರು; ನಿನ್ನೆ ತಡರಾತ್ರಿ ತುಮಕೂರಿನಲ್ಲಿ ಹೆಣವೊಂದು ಬಿದ್ದಿದೆ..ಬೀಸಿದ ಮಚ್ಚಿನೇಟಿಗೆ ನೆತ್ತಿ ಚಿಪ್ಪು ಕಲಸಿಹೋಗಿದೆ..ಬೆಳ್ಳಿಗ್ಗೆಯಿಂದ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿದ್ದ ಏರಿಯಾದಲ್ಲೀಗ ನೀರವ ಮೌನ..ಇದಕ್ಕೆ ಕಾರಣ ಅದೊಂದು ಬರ್ಬರ ಕೊಲೆ
ಹೌದು..ತುಮಕೂರಿನ ಬೆತ್ತಲೂರಿನಲ್ಲಿ ಇದೀಗ ಸ್ಮಶಾನ ಮೌನ..ಇದಕ್ಕೆ ಕಾರಣ ಕ್ರಿಸ್ಮಸ್ ಹಬ್ಬದ ಎಣ್ಣೆ ಏಟು.. ಬೆಳ್ಳಿಗ್ಗೆಯಿಂದ ಹೊಸ ಬಟ್ಟೆ ಹಾಕ್ಕೊಂಡು ಚರ್ಚ್ ನಲ್ಲಿ ಪ್ರೇಯರ್ ಮುಗುಸ್ಕೊಂಡು ಮಧ್ಯಹ್ನಾದ ಹೊತ್ತಿಗೆ ಏರಿಯಾದ ಹುಡುಗರು ಎಣ್ಣೆ ನಶೆಯಲ್ಲಿ ಫುಲ್ ಚಿತ್ ಆಗಿದ್ರು.. ರಾತ್ರಿವರೆಗೂ ಕಂಠಮಟ್ಟ ಕುಡ್ಕೊಂಡು ತೂರಾಡುತ್ತಿದ್ದ ಆ ಒಂದಿಬ್ಬರು ಹುಡುಗರ ನಡುವೆ ಶುರುವಾಗಿತ್ತು ನೋಡಿ ಜಮೀನು ಜಗಳ.. ಅದರ ಮುಂದವರಿದ ಭಾಗವೇ ಭೀಕರ ಕೊಲೆ..

ಹೌದು.. ತುಮಕೂರಿನ ಭೀಮಸಂದ್ರ ಬಳಿಯಿರುವ ಬೆತ್ತಲೂರಿನಲ್ಲಿ ಕ್ರೌರ್ಯವೊಂದು ನಡೆದು ಹೋಗಿತ್ತು… ಕ್ರಿಸ್ಮಸ್ ಹಬ್ಬದ ಹಿನ್ನೆಲೆ ಕುಡಿದು ಕೂತಿದ್ದ ನಿರಂಜನ್ ಮತ್ತು ಮಧು ಎಂಬುವವರ ನಡುವೆ ಜಮೀನು ವಿಚಾರವಾಗಿ ಮಾತು ಶುರುವಾಗಿತ್ತು..ಎಣ್ಣೆಯ ರಂಗು ಹೆಚ್ಚಾದಂತೆ ಮಾತಿನ ವರಸೆ ಬದಲಾಗಿತ್ತು.. ಸ್ನೇಹಿತರು ಶತ್ರುಗಳಾಗಿದ್ರು.. ಸಣ್ಣದೊಂದು ಗಲಾಟೆ ಹೊಡೆದಾಟಕ್ಕೆ ತಿರುಗಿತ್ತು..ಇದೇ ವೇಳೆ ರೊಚ್ಚಿಗೆದ್ದ ಮಧು ಹಾಗೂ ಆತನ ಹುಡುಗರು ಟೂಲ್ಸು ತೆಗೆದಿದ್ರು..ನೋಡ ನೋಡುತ್ತಲೇ ನಿರಂಜನ್ ನೆತ್ತಿ ಮೇಲೆ ಮಚ್ಚಿನೇಟು ಬಿದ್ದಿತ್ತು.. ಅಷ್ಟೆ ಸ್ಪಾಟಲ್ಲೇ ಮುಗಿದು ಹೋಗಿದ್ದ ನಿರಂಜನ್..
ಅಂದಾಗೆ ಹೆಣ ಹಾಕಿ ಪರಾರಿಯಾಗಿರುವ ಮಧು ಅಸಲಿಗೆ ರೌಡಿ ಶೀಟರ್.. ಆತನ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೆಂಡಿಗಟ್ಟಲೇ ಕೇಸುಗಳಿವೆ.. ಇನ್ನು ಕೊಲೆಯಾದ ನಿರಂಜನ್ ಬಿಲ್ಡಿಂಗ್ ಕಾಂಟ್ರಾಕ್ಟ್ ಕೆಲಸ ಮಾಡಿಕೊಂಡಿದ್ದ.. ಸದ್ಯ ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸ್ರು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಹೆಣವನ್ನ ಪಂಚನಾಮೆಯ ಮಂಚದ ಮೇಲೆ ಮಲಗಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.. ಒಟ್ನಲ್ಲಿ ಕ್ರಿಸ್ಮಸ್ ಹಬ್ಬದ ಪಾರ್ಟಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.. ಹಬ್ಬದ ಸಂಭ್ರಮದಲ್ಲಿದ್ದ ಬೆತ್ತಲೂರಿನಲ್ಲಿ ಸ್ಮಶಾನ ಮೌನ..