ಜಿಲ್ಲೆರಾಜ್ಯವೈರಲ್ ನ್ಯೂಸ್

ಹಗಲಿನಲ್ಲಿ ಗ್ರಾಮಕ್ಕೆ ಬಂದ ಬೆಕ್ಕನ್ನೇ ಚಿರತೆ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಆನೇಕಲ್ : ದೂರದಿಂದ ಚಿರತೆ ಭ್ರಮೆಯಲ್ಲೇ ಬೆಕ್ಕಿನ ಓಡಾಟ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಚಾರಕ್ಕೆ ಮದ್ಯಾಹ್ನದಿಂದ ರಾತ್ರಿಯಿಡಿ ಅರಣ್ಯಾಧಿಕಾರಿಗಳ ಮೊಕ್ಕಾಂ ಹೂಡಿರುವ ಘಟನೆ ಆನೇಕಲ್ ಮುತ್ತಾನಲ್ಲೂರಿನ‌ ಗೋಪಸಂದ್ರದಲ್ಲಿ‌ ನಡೆದಿದೆ.‌

ಕೆಲ ಸಿಸಿ ಕ್ಯಾಮೆರಾಗಳಲ್ಲಿ ತಡರಾತ್ರಿ ಚಿರತೆ ಓಡಾಟ ಸಹಜವಾಗಿ ಕಂಡು ಬಂದ ಹಿನ್ನಲೆ ಅದೇ ಭ್ರಮೆಯಲ್ಲಿ ದೂರದಿಂದ ಬೆಕ್ಕಿನ ಓಡಾಟವನ್ನೇ ಚಿರತೆ ಎಂದು ಬಿಂಬಿಸಲಾಗಿದೆ. ಸಾಮಾನ್ಯವಾಗಿ ಬೆಕ್ಕಿನ ಪ್ರಬೇಧಕ್ಕೆ ಸೇರಿದ ಚಿರತೆಯ ನಡೆ, ಬೆಕ್ಕಿನ‌ ನಡೆಯೂ ಹೋಲಿಕೆಯಾಗುವುದರಿಂದ‌ ದೃಶ್ಯ ದೂರದಿಂದ ಸೆರೆ ಹಿಡಿದು ವೈರಲ್ ಅವಾಂತರ ಸೃಷ್ಟಿಸಿದೆ ಎಂದು ಹೆಸರೇಳದ ಅರಣ್ಯಾಧಿಕಾರಿಯೊಬ್ಬರು ದೃಶ್ಯವನ್ನು ಪರಿಶೀಲಿಸಿ ತಿಳಿಸಿದ್ದಾರೆ.‌ಅದಾಗ್ಗಿಯೂ ಗ್ರಾಮದ ಜನತೆ ಗಾಬರಿಯಾಗದಿರಲಿ‌ ಎಂದು ಪಟಾಕಿ ಸಿಡಿಸಿ ರಾತ್ರಿಯಿಡೀ ಗಸ್ತು ತರುಗಿ ಗ್ರಾಮದಲ್ಲಿ ಮೊಕ್ಕಾ ಹೂಡಿದ್ದಾರೆ.

ಈ ಹಿಂದೆ ಹುಸ್ಕೂರಿನ ರಸ್ತೆಯಲ್ಲಿ ಕಾರಿನ ಮುಂದೆ ಚಿರತೆ ಹಾದು ಹೋದ ದೃಶ್ಯ ವೈರಲ್ ಆಗಿದ್ದರೂ ಚಿರತೆ ಮತ್ತೊಮ್ಮೆ ಕಾಈಸಿರಲಿಲ್ಲ ಚಿಂತಲ ಮಡಿವಾಳದಲ್ಲಿ ಚಿರತೆ ಹೆಜ್ಜೆ ಗುರುತು ಎಂದು ದೃಶ್ಯ ವೈರಲ್ ಆಗಿತ್ತು. ಆದರೆ ಅರಣ್ಯಾಧಿಕಾರಿಗಳು ಆ ಹೆಜ್ಜೆ ಗುರುತನ್ನು ಪರಿಶೀಲಲಾಗಿ ಅದು ನಾಯಿಯದ್ದು ಎಂದು ಖಾತರಿಯಾಗಿತ್ತು. ಇದರ ಬೆನ್ನಲ್ಲೇ ಹಗಲಿನಲ್ಲಿ ಗ್ರಾಮದೊಳಗೆ ಸಾಮಾನ್ಯವಾಗಿ ಚಿರತೆ ಬರಲಾರದು ಎಂಬ ದೃಢ ಅಭಿಪ್ರಾಯವನ್ನು ದೃಶ್ಯ ನೋಡಿದ ಅರಣ್ಯಾಧಿಕಾರಿ ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button