ಮಳೆ ನೀರಿನಲ್ಲಿ ಕೊಚ್ಚಿ ಹೋದ 3 ವರ್ಷದ ಮಗು

ಮಳೆ ನೀರಿನಲ್ಲಿ ಆಟವಾಡುತ್ತಿರುವಾಗಲೇ ಚರಂಡಿಗೆ ಬಿದ್ದು 3 ವರ್ಷದ ಮಗು ಕೊಚ್ಚಿ ಹೋದ ಘಟನೆ ಇಂಡೋನೇಷ್ಯಾದ ಸುರಬಯಾದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆಟವಾಡುತ್ತಲೇ ಪುಟ್ಟ ಕಂದಮ್ಮ ಚರಂಡಿ ನೀರಿನಲ್ಲಿ ಮುಳುಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಟಿ ಟುಡೇ ವರದಿಯ ಪ್ರಕಾರ, ಡಿಸೆಂಬರ್ 24 ರಂದು ಈ ಘಟನೆ ನಡೆದಿದ್ದು, ಮಳೆಗೆ ಮೂರು ಮಕ್ಕಳು ಮನೆಯ ಹೊರಗೆ ಆಟವಾಡುತ್ತಿದ್ದಾಗ ಈ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ವೀಡಿಯೊದಲ್ಲಿ, ಮೊದಲನೆಯದಾಗಿ ಹುಡುಗಿ ಓಡಿ ಬಂದಿರುವುದನ್ನು ಕಾಣಬಹುದು. ಅವಳ ಹಿಂದೆ ಅವಳ ಮೂರು ವರ್ಷದ ತಮ್ಮನ್ನೂ ಓಡಿಬಂದಿದ್ದಾನೆ. ಇದಾದ ನಂತರ ಮಗು ನೀರಿನ ಬಳಿ ಹೋಗಿ ಅದರಲ್ಲಿ ಮುಳುಗಿದೆ. ಆಶ್ಚರ್ಯದ ಸಂಗತಿಯೆಂದರೆ, ಹುಡುಗಿ ತನ್ನ ಸ್ಥಳದಲ್ಲಿ ನಿಂತು ತನ್ನ ಸಹೋದರ ಮುಳುಗುವುದನ್ನು ನೋಡುತ್ತಲೇ ಇರುತ್ತಾಳೆ. ಈ ಗಂಭೀರ ಅಪಘಾತವನ್ನು ಆಕೆಗೆ ಏನಾಯಿತು ತಿಳಿದಿರಲಿಲ್ಲ ಎಂದು ತೋರುತ್ತದೆ.




