Friday, August 22, 2025
24.2 C
Bengaluru
Google search engine
LIVE
ಮನೆರಾಜಕೀಯಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕಾಂಗ್ರೆಸ್ ಮುಖಂಡರಿಗೆ ತೀವ್ರ ಮುಖಭಂಗ : ಅಶ್ವಥನಾರಾಯಣ್

ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕಾಂಗ್ರೆಸ್ ಮುಖಂಡರಿಗೆ ತೀವ್ರ ಮುಖಭಂಗ : ಅಶ್ವಥನಾರಾಯಣ್

ಬೆಂಗಳೂರು: ಬೆಂಗಳೂರು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಆ ರೀತಿ ಘೋಷಣೆ ಕೂಗಿಲ್ಲ ಎಂದು ವಾದ ಮಾಡುವ ಕಾಂಗ್ರೆಸ್ ಮುಖಂಡರಿಗೆ ಇದೀಗ ತೀವ್ರ ಮುಖಭಂಗವಾಗಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥನಾರಾಯಣ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು ತಮಗಾಗಿರುವ ಅಪಮಾನಕ್ಕೆ ಪ್ರತೀಕಾರವಾಗಿ ಮತ್ತು ಹತಾಶೆಯಿಂದ ಮಂಡ್ಯದಲ್ಲಿ ಎರಡು ವರ್ಷದ ಕೆಳಗೆ ಬಿಲಾವರ್ ಭುಟ್ಟೊ ವಿರುದ್ದ ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ರವಿಯವರು ಪಾಕಿಸ್ಥಾನ ಮುರ್ದಾಬಾದ್ ಎಂದು ಕೂಗಿದ್ದರು. ಅವರಿಗೆ ಹಿಂದಿ ಭಾಷೆ ತಿಳಿಯದ ಕಾರಣ ಅವರು ಅಚಾತುರ್ಯದಿಂದ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದರು. ಆ ನಿಷ್ಠವಂತ ಕಾರ್ಯಕರ್ತರು ತಮ್ಮ ತಪ್ಪಿನ ಅರಿವಾಗಿ ಅವರು ಸ್ಪಷ್ಟೀಕರಣ ನೀಡಿದ್ದಲ್ಲದೆ ತಮ್ಮ ತಪ್ಪಿಗೆ ಕ್ಷಮೆಯನ್ನು ಕೋರಿದ್ದರು. ಅವರು ಘೋಷಣೆಯು ಉದ್ದೇಶಪೂರ್ವಕವಾಗಿ ಕೂಗಿದ್ದಲ್ಲಾ ಎಂದು ತನಿಖೆಯ ನಂತರ ತಿಳಿದ ಮೇಲೆ ಪೊಲೀಸರು ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆಗಿರುವ ಘಟನೆಗಳನ್ನು ವಿಷಯಾಂತರ ಗೊಳಿಸುವುದು ಮತ್ತು ಸೇಡಿನ ಭಾವನೆಯಿಂದ ಅಮಾಯಕ ಕಾರ್ಯಕರ್ತರನ್ನು ಬಂಧಿಸುವ ಉದ್ಧಟತನ ತೋರಿರುವದನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.

ಮುಸ್ಲಿಂ ಯುವಕರನ್ನು ಬಂಧನ ಮಾಡಿದ ಕಾರಣಕ್ಕೆ ಮುಚ್ಚಿ ಹೋಗಿದ್ದ ಪ್ರಕರಣದಲ್ಲಿ ಹಿಂದೂ ಯುವಕರನ್ನು ಬಂಧಿಸಿರುವುದು ಇವರ ತುಷ್ಟೀಕರಣ ನೀತಿಯ ಭಾಗ ಇದಾಗಿದೆ. ಕಳೆದ ವಾರ ವಿಧಾನ ಸೌಧದಲ್ಲಿ “ಪಾಕಿಸ್ತಾನ ಜಿಂದಾಬಾದ್” ಎಂದು ಕೂಗಿದ್ದು, ವಿಡೀಯೊದಲ್ಲಿ ಸ್ಪಷ್ಟವಾಗಿದ್ದರು ಆ ದ್ರೋಹಿಗಳನ್ನು ಬೆಂಬಲಿಸಿದ ಕಾಂಗ್ರೆಸ್ ಸಚಿವರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಅವರು ಹೇಳಿದ್ದಾರೆ.

ಅಪರಾಧ ಮಾಡುವುದು ಮತ್ತು ಅಪರಾಧಿಗಳನ್ನು ಬೆಂಬಲಿಸುವುದು ಗಂಭೀರವಾದ ಅಪರಾಧ ಆದ್ದರಿಂದ ಪೊಲೀಸರು ಆರೋಪಿಗಳನ್ನು ಬೆಂಬಲಿಸಿದ ಮೇಲೆಯೂ ಮೊಕದ್ದಮೆ ದಾಖಲು ಮಾಡಬೇಕು. ಸರ್ಕಾರ ಅಮಾಯಕ ಕಾರ್ಯಕರ್ತರ ಮೇಲೆ ಹೂಡಿರುವ ಸುಳ್ಳು ಮೊಕದ್ದಮೆಯನ್ನು ವಾಪಸ್ ಪಡೆಯಬೇಕು ಇಲ್ಲ ಅಪರಾಧಿಗಳ ಬೆಂಬಲಕ್ಕೆ ನಿಂತಿದ್ದ ಸರ್ಕಾರದ ಮಂತ್ರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments