Top News

RameshwaramCafe: ರಾಮೇಶ್ವರಂ ಕೆಫೆಗೆ ಅಸಾದುದ್ದೀನ್ ಓವೈಸಿ ಭೇಟಿ.. ಪುಡಿ ಇಡ್ಲಿ ಸೇವನೆ

ಬೆಂಗಳೂರಿನ ಕುಂದಲಹಳ್ಳಿಯಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ರಾಮೇಶ್ವರಂ ಕೆಫೆ ದೇಶಾದ್ಯಂತ ಸುದ್ದಿಯಾಗಿದೆ.

ಹೈದರಾಬಾದ್​ನ ರಾಮೇಶ್ವರಂ ಕೆಫೆಗೆ ಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ಭೇಟಿ ನೀಡಿ ಪುಡಿ ಇಡ್ಲಿ ತಿಂದು, ವಾವ್ ಸಖತ್ ಟೇಸ್ಟ್ ಎಂಬ ಉದ್ಘಾರ ತೆಗೆದಿದ್ದಾರೆ.

ರಾಮೇಶ್ವರಂ ಕೆಫೆಗೆ ಆಗಮಿಸಿದ ಅಸಾದುದ್ದೀನ್ ಓವೈಸಿಯವರನ್ನು ಕೆಫೆ ಒಡತಿ ದಿವ್ಯಾರಾಘವೇಂದ್ರರಾವ್ ಖುದ್ದಾಗಿ ಸ್ವಾಗತಿಸಿ ಸತ್ಕರಿಸಿದರು. ಅಸಾದುದ್ದೀನ್ ಓವೈಸಿ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹಲವು ಗ್ರಾಹಕರು ಮುಗಿಬಿದ್ದಿದರು.

ಈ ಸಂದರ್ಭದಲ್ಲಿ ಎಪಿಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥ, ಅವರ ಹುಟ್ಟೂರಾದ ರಾಮೇಶ್ವರಂ ಹೆಸರನ್ನು ಕೆಫೆಗೆ ಇಟ್ಟಿರೋದನ್ನು ಶ್ಲಾಘಿಸಿದರು.

ಅಲ್ಲದೇ, ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣವನ್ನು ಅಸಾದುದ್ದೀನ್ ಓವೈಸಿ ತೀವ್ರವಾಗಿ ಖಂಡಿಸಿದರು. ಇದು ಹೇಡಿಗಳ ಕೃತ್ಯ.. ಭಾರತೀಯ ಸಂಸ್ಕೃತಿ ಮೇಲಿನ ದಾಳಿ ಎಂದು ಅಸಾದುದ್ದೀನ್ ಓವೈಸಿ ಆಕ್ರೋಶ ಹೊರಹಾಕಿದರು. ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಮೂಲಕ ದಿವ್ಯಾ ರಾಘವೇಂದ್ರರಾವ್ ಅವರಲ್ಲಿ ಅಸಾದುದ್ದೀನ್ ಓವೈಸಿ ಧೈರ್ಯ ತುಂಬಿದರು

Comments (0)

Your email address will not be published. Required fields are marked *

Back to top button