ಮೊದಲ ಪಟ್ಟಿಯಲ್ಲಿ 33 ಫೈರ್ ಬ್ರಾಂಡ್ ಸಂಸದರಿಗೆ ಕೊಕ್ ಕೊಟ್ಟ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯಿಂದ ರಾಜ್ಯದಲ್ಲೂ ನಾಲ್ಕು ಸಂಸದರಿಗೆ ಕೊಕ್. ಪ್ರಮುಖವಾಗಿ ಸದಾ ಸುದ್ದಿಯಲ್ಲಿರುತ್ತಿದ್ದ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಮತ್ತು ಇತ್ತಿಚೆಗಷ್ಟೆ ಅಧ್ಯಕ್ಷರಿಗಿರಿಯಿಂದ ಕೆಳಗಿಳಿದ ನಳಿನ್ ಕುಮಾರ್ ಕಟಿಲ್ ಪತ್ರಿಕಾರಂಗದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಮೈಸೂರು ಮತ್ತು ಮಡಿಕೇರಿ ಸಂಸದ ಪ್ರತಾಪ್ ಸಿಂಹ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ ದಿಢೀರ್ ಎಂದು ರಾಜಕೀಯಕ್ಕೆ ಎಂಟ್ರಿ ಕೊಟ್ಟು ಮೊದಲ ಸಲವೇ ಸಂಸದರಾಗಿ ಆಯ್ಕೆಯಾಗಿ ಸದ್ದು ಮಾಡಿದ್ರು.
ಈ ಮೇಲೆ ತಿಳಿಸಿರುವ ಸಂಸದರು ಒಂದಲ್ಲ ಒಂದು ಸುದ್ದಿಯಲ್ಲಿ ಫೈರ್ ಬ್ರಾಂಡ್ ಗಳಾಗಿದ್ದರು. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿಒಂದು ಉನ್ನತ ಮಟ್ಟದ ಸಭೆಯಲ್ಲಿ ಪಕ್ಷ ಮಹತ್ವದ ತೀರ್ಮಾನ ಕೈಗೊಂಡಿತ್ತು. ಹಲವು ಭಾರಿ ಇವರ ಭಾಷಣಗಳಿಂದ ಪಕ್ಷಕ್ಕೆ ಮುಜುಗರವಾಗುತ್ತಿತ್ತು. ಉತ್ತರ ಭಾರತದಲ್ಲಿ ಮುಸ್ಲಿಂ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ವಾದಿಗಳು ಸೇರಿದಂತೆ ಹಲವು ಮತದಾರರು ಕಳೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ನಂತರ ಮೌನಕ್ಕೆ ಶರಣಾಗಿದ್ದಾರೆ. ಆಂತರಿಕ ಸರ್ವೆಯಿಂದ ಫೈರ್ ಬ್ರಾಂಡ್ ಗಳಿಂದ ಲಾಭಕ್ಕಿಂತ ಈ ಬಾರಿ ಚುನಾವಣೆಯಲ್ಲಿ ನಷ್ಟವೇ ಹೆಚ್ಚು ಎಂದು ಜಗಜ್ಜಾಹೀರಾಯ್ತು. ಈ ಕಾರಣದಿಂದ ರಾಜ್ಯದಲ್ಲೂ ಸಹ ನಾಲ್ಕು ಸಂಸದರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪೋದು ದೆಹಲಿ ಮೂಲಗಳಿಂದ ಖಚಿತವಾಗಿದೆ.
ಉದಾಹರಣೆಗೆ ಲವ್ ಜಿಹಾದ್, ಫ್ಲೈಟ್ ಬಾಗಿಲು ತೆಗೆದಿದ್ದು, ಟಿಪ್ಪು, ಹಿಜಾಬ್, ಈ ಪ್ರಕರಣಗಳಲ್ಲಿ ಹೆಚ್ಚು ಸದ್ದು ಮಾಡಿದ್ದ ಈ ಸಂಸದರಿಗೆ ಟಿಕೆಟ್ ನೀಡದಿರಲು ಮೇಲ್ಕಂಡ ವಿಷಯಗಳೇ ಕಾರಣ ಎಂದು ತಿಳಿದು ಬಂದಿದೆ. ಕೇಂದ್ರ ನಾಯಕರ ಸೂಚನೆಯಂತೆ ಕಳೆದ 3 ದಿನಗಳಿಂದ ಮೌನಕ್ಕೆ ಶರಣಾಗಿದ್ದಾರೆ.