Wednesday, January 28, 2026
20.2 C
Bengaluru
Google search engine
LIVE
ಮನೆUncategorizedಬಿಬಿಎಂಪಿ 8 ವಲಯಗಳಲ್ಲಿ ತೆರಿಗೆ ಬಾಕಿ: ಕೋಟಿ ಕುಳಗಳೇ ಕಟ್ಟಿಲ್ಲ ತೆರಿಗೆ

ಬಿಬಿಎಂಪಿ 8 ವಲಯಗಳಲ್ಲಿ ತೆರಿಗೆ ಬಾಕಿ: ಕೋಟಿ ಕುಳಗಳೇ ಕಟ್ಟಿಲ್ಲ ತೆರಿಗೆ

ಬಿಬಿಎಂಪಿ ಆಸ್ತಿ ತೆರಿಗೆ ವಂಚಕರ ವಿರುದ್ಧ ಸಮರ ಸಾರಿದೆ. ಕೋಟಿ ಕೋಟಿ ಆಸ್ತಿ ತೆರಿಗೆ ಉಳಿಸಿಕೊಂಡವರಿಗೆ ಶಾಕ್ ನೀಡಿ ತೆರಿಗೆ ವಸೂಲಿ ಮಾಡೋಕೆ ಬಿಬಿಎಂಪಿ ನಾನಾ ಕಸರತ್ತು ನಡೆಸುತ್ತಿದೆ. ತೆರಿಗೆ ವಂಚಕರ ಮೇಲೆ ಬಿಬಿಎಂಪಿ ಇದೀಗ ಮತ್ತೊಂದು ಬ್ರಹ್ಮಾಸ್ತ್ರ ಬಿಡೋಕೆ ಸಜ್ಜಾಗಿದೆ. ತೆರಿಗೆ ಕಟ್ರಿ ಅಂತ ಬಿಬಿಎಂಪಿ ಎಷ್ಟು ಬಾರಿ ನೋಟಿಸ್ ಕೊಟ್ರು ಆಸ್ತಿ ಮಾಲೀಕರು ಡೋಂಟ್ ಕೇರ್ ರೀತಿ ವರ್ತಿಸುತ್ತಿದ್ರು.

ಹೇಗಾದ್ರೂ ಮಾಡಿ ಆಸ್ತಿ ತೆರಿಗೆ ಸಂಗ್ರಹ ಮಾಡಲೇಬೇಕು ಅಂತ ಡಿಸೈಡ್ ಮಾಡಿರುವ ಬಿಬಿಎಂಪಿ ಒಂದರ ಹಿಂದೆ ಒಂದರಂತೆ ಅಸ್ತ್ರಗಳನ್ನ ಪ್ರಯೋಗ ಮಾಡುತ್ತಲೇ ಇದೆ. ಇದೀಗ ಆಸ್ತಿ ತೆರಿಗೆ ಸಂಗ್ರಹಕ್ಕಾಗಿ ವಂಚಕರ ಪಟ್ಟಿಯನ್ನ ತನ್ನ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ಬಿಬಿಎಂಪಿಯ 8 ವಲಯಗಳಲ್ಲಿ ತೆರಿಗೆ ಕಟ್ಟದೆ ಡಿಫಾಲ್ಟರ್ ಲಿಸ್ಟ್ ಮಾಡಿ ವೆಬ್ ಸೈಟ್ ನಲ್ಲಿ ಹಾಕಿದೆ.

ಪ್ರತಿ ವಲಯದಲ್ಲೂ ಟಾಪ್ 50 ತೆರಿಗೆ ವಂಚಕರ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಕೋಟಿ ಕೋಟಿ ಲೆಕ್ಕದಲ್ಲಿ ತೆರಿಗೆ ಬಾಕಿ ಇದೆ. ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡಿ, ಕೋಟಿಗಟ್ಟಲೇ ಸಂಪಾದಿಸುವ ಕಂಪನಿಗಳೇ ತೆರಿಗೆ ಕಟ್ಟಿಲ್ಲ ಅಂದ್ರೆ ಹೇಗೆ..ಇನ್ನು ಯಾರಾದ್ರೂ ಜನಸಾಮಾನ್ಯರು ಮನೆ ಕಂದಾಯ ಬಾಕಿ ಉಳಿಸಿಕೊಂಡ್ರೆ, ಮನೆ ಬಾಗಿಲಿಗೆ ಬಂದು ವಸೂಲಿ ಮಾಡುವ ಬಿಬಿಎಂಪಿ ಸಿಬ್ಬಂದಿಗಳು, ದೊಡ್ಡವರನ್ನ ಮುಟ್ಟೋಕೆ ಹಿಂದೇಟು ಹಾಕುತ್ತಿದ್ರು..ಹೀಗಾಗಿಯೇ ತೆರಿಗೆ ಕೋಟಿ ಲೆಕ್ಕದಲ್ಲಿ ಬಾಕಿ ಉಳಿದಿದೆ.

ಬೊಮ್ಮನಹಳ್ಳಿ, ದಾಸರಹಳ್ಳಿ,ಪೂರ್ವ ಮಹದೇವಪುರ,ಆರ್ ಆರ್ ನಗರ, ದಕ್ಷಿಣ ,ಪಶ್ಚಿಮ ಹಾಗೂ ಯಲಹಂಕ ವಲಯಗಳ ವ್ಯಾಪ್ತಿಯಲ್ಲಿರುವ ತೆರಿಗೆ ವಂಚಕರ ಪಟ್ಟಿಯನ್ನ ಇದೀಗ ಬಿಬಿಎಂಪಿ ಬಿಡುಗಡೆ ಮಾಡಿದೆ. ಯಲಹಂಕ ವಲಯದಲ್ಲಿ 7758795 ಕೋಟಿ ಬಾಕಿ ಇದೆ. ದಕ್ಷಿಣ ವಲಯದಲ್ಲಿ 125537345 ಕೋಟಿ ಹಣ ತೆರಿಗೆ ಬರಬೇಕಿದೆ. ಇನ್ನು ಬೊಮ್ಮನಹಳ್ಳಿ ವಲಯದಲ್ಲಿ 31807089 ಕೋಟಿ ಬಾಕಿ ಇದೆ. ಈ ರೀತಿ ಪ್ರತಿ ವಲಯದಲ್ಲೂ ಕೋಟಿ ಕೋಟಿ ಬಾಕಿ ಉಳಿಸಿಕೊಂಡಿರುವ ತೆರಿಗೆದಾರರ ಪಟ್ಟಿಯನ್ನ ಪಾಲಿಕೆ ಬಿಡುಗಡೆ ಮಾಡಿದ್ದು, ವಸೂಲಿ ಮಾಡೋದು ಯಾವಾಗ ಅನ್ನೋದನ್ನ ಕಾದು ನೋಡಬೇಕಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments