Wednesday, January 28, 2026
18.8 C
Bengaluru
Google search engine
LIVE
ಮನೆಜಿಲ್ಲೆಮುರ್ಡೇಶ್ವರದಲ್ಲಿ ಪ್ಲೋಟಿಂಗ್ ಬ್ರಿಡ್ಜ್ ಲೋಕಾರ್ಪಣೆ

ಮುರ್ಡೇಶ್ವರದಲ್ಲಿ ಪ್ಲೋಟಿಂಗ್ ಬ್ರಿಡ್ಜ್ ಲೋಕಾರ್ಪಣೆ

ಕಾರವಾರ : ರಜಾ ದಿನಗಳು ಬಂತೆಂದರೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಅದರಲ್ಲೂ ಕರಾವಳಿಯ ಗೋಕರ್ಣ ಮತ್ತು ಮುರ್ಡೇಶ್ವರದಲ್ಲಿ ದೇಶದ ನಾನಾ ಭಾಗಗಳಿಂದ ಪ್ರವಾಸಿಗರ ದಂಡು ಹರಿದು ಬರುತ್ತದೆ. ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರವಾದ ಮುರ್ಡೇಶ್ವರಕ್ಕೆ ಪ್ರತಿ ತಿಂಗಳು ಸರಾಸರಿ ಎರಡು ಲಕ್ಷಕ್ಕಿಂತ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಹರಿದು ಬರುತ್ತಾರೆ. ಸಮುದ್ರ ಸ್ನಾನದ ಜೊತೆ, ಜಲಸಾಹಸ ಕ್ರೀಡೆ, ಸ್ಕೂಬಾ ಡೈವ್ ನಂತ ಚಟುವಟಿಕೆಯಲ್ಲಿ ಭಾಗಿಯಾಗುವ ಪ್ರವಾಸಿಗರಿಗೆ ರಾಜ್ಯದ ಅತೀ ದೊಡ್ಡ ಫ್ಲೋಟಿಂಗ್ ಬ್ರಿಡ್ಜ್ ಮೂಲಕ ಸಮುದ್ರದಲ್ಲಿ ಹೆಜ್ಜೆ ಹಾಕಲು ಇದೀಗ ಅವಕಾಶ ಒದಗಿ ಬಂದಿದೆ.

ಉಡುಪಿಯ ಮಲ್ಪೆ ಬೀಚ್‌ನಲ್ಲಿ 100 ಮೀಟರ್ ಪ್ಲೋಟಿಂಗ್ ಬ್ರಿಡ್ಜ್ ನ್ನು 80 ಲಕ್ಷ ರೂ.ಖರ್ಚು ಮಾಡಿ ನಿರ್ಮಿಸಲಾಗಿತ್ತು. ಆದರೆ ಸಮುದ್ರದ ಅಲೆಗೆ ಈ ಪ್ಲೋಟಿಂಗ್ ಬ್ರಿಡ್ಜ್ ಕಿತ್ತುಹೋಗಿ ಪ್ರವಾಸಿಗರಿಗೆ ನಿರಾಸೆ ತಂದೊಡ್ಡಿತ್ತು. ಇದೀಗ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ 130 ಮೀಟರ್ ಉದ್ದದ ಒಂದು ಕೋಟಿ ರೂ. ವೆಚ್ಚದ ಪ್ಲೋಟಿಂಗ್ ಬ್ರಿಡ್ಜ್ ನ್ನು ಓಶಿಯನ್ ಅಡ್ವೆಂಚರ್ಸ್ ಸಂಸ್ಥೆ ನಿರ್ಮಿಸಿ ಪ್ರವಾಸಿಗರಿಗೆ ಲೋಕಾರ್ಪಣೆ ಮಾಡಿದೆ.

ಪ್ರವಾಸಿಗರ ಆಕರ್ಷಣೆಗಾಗಿ ಬೋಟಿಂಗ್, ವಾಟರ್ ಸ್ಕೂಟರ್, ಫ್ಲೋಟಿಂಗ್ ಬ್ರಿಡ್ಜ್, ಪ್ಯಾರಾಚೂಟ್ ಮೊದಲಾದ ಮನರಂಜನಾ ಸಾಧನ ಇದೀಗ ಪ್ರವಾಸಿಗರಿಗೆ ಮುರ್ಡೇಶ್ವರದಲ್ಲಿ ಲಭ್ಯವಿದೆ. ಪ್ರವಾಸಿಗರು ಇವುಗಳ ಆನಂದ ಸವಿಯಬಹುದು. ಸುಮಾರು 130 ಮೀ.ಉದ್ದ, 3.50 ಮೀ. ಅಗಲವಿರುವ ಈ ಸೇತುವೆಯ ಎರಡೂ ಬದಿಯಲ್ಲಿ ಪ್ರವಾಸಿಗರ ರಕ್ಷಣೆಗೆ ರೈಲಿಂಗ್ಸ್‌ ಅಳವಡಿಸಲಾಗಿದ್ದು, ಸಮುದ್ರಕ್ಕೆ ಬೀಳುವ ಅಪಾಯ ಕಡಿಮೆ. ಪ್ರವಾಸಿಗರ ರಕ್ಷಣೆಗಾಗಿ ಲೈಫ್ ಗಾರ್ಡ್‌ಗಳು ಇರಲಿದ್ದಾರೆ. ತೇಲುವ ಸೇತುವೆಯ ಅನುಭವ ಪಡೆಯಲಿಚ್ಛಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಲೈಫ್ ಜಾಕೆಟ್ ತೊಡಬೇಕಿದೆ.

ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಸಿದ್ದರಿಂದ ಸಮುದ್ರದ ಅಲೆಗಳ ಹೊಡೆತಕ್ಕೆ ತೇಲಿಹೋಗುವ ಭಯವಿರುವುದಿಲ್ಲ. ಜೊತೆಗೆ ಮಳೆಗಾಲದಲ್ಲಿ ನಿರ್ಬಂಧಿತ ದಿನ ಹೊರತುಪಡಿಸಿ ಉಳಿದ ದಿನಗಳು ಪ್ರವಾಸಿಗರಿಗೆ ಫ್ಲೋಟಿಂಗ್ ಬ್ರಿಡ್ಜ್ ನಲ್ಲಿ ಸೀ ವಾಕ್ ಮಾಡಲು ಅವಕಾಶ ಕಲ್ಪಿಸಿ ಕೊಡಲಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments