ಬೆಂಗಳೂರು : ಬಿಟ್ ಕಾಯಿನ್ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪೊಲೀಸ್ ಅಧಿಕಾರಿಯನ್ನು ಎಸ್ ಐಟಿ ಬಂಧಿಸಿದೆ. ಇನ್ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯ ಎಂಬುವವರನ್ನು ಬಂಧಿಸಿದ್ದು, ಇವರು ಸಿಸಿಬಿಯಲ್ಲಿ ಬಿಟ್ ಕಾಯಿನ್ ಕೇಸ್ ತನಿಖಾಧಿಕಾರಿ ಆಗಿದ್ರು. ಇಂದು ಬೆಳಗ್ಗೆ ಲಕ್ಷೀಕಾಂತಯ್ಯನನ್ನು ಎಸ್ ಐಟಿ ಬಂಧಿಸಿದ್ದು, 1ನೇ ACMM ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹೆಚ್ಚಿನ ವಿಚಾರಣೆ ಹಿನ್ನೆಲೆ ಇನ್ಸಪೆಕ್ಟರ್ ಕಾಂತಯ್ಯ ಮಾ.7ರವರೆಗೆ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶಿಸಲಾಗಿದೆ.
ನಿನ್ನೆ ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿ ಶ್ರೀಧರ್ ಪೂಜಾರ್ ಬಂಧಿಸಲು ತೆರಳಿದಾಗಿ ಕಾರಿನಿಂದ ಗುದ್ದಿ ಪರಾರಿಯಾಗಿದ್ದ. ಮತ್ತೊಬ್ಬ ಇನ್ಸ್ಪೆಕ್ಟರ್ ಚಂದ್ರಾಧರ್ ಕೂಡ ಎಸ್ಕೇಪ್ ಆಗಿದ್ದಾನೆ. ಸದ್ಯ ತಲೆಮರೆಸಿಕೊಂಡಿರುವ ಶ್ರೀಧರ್ ಪೂಜಾರ್ ಹಾಗೂ ಚಂದ್ರಾಧರ್ ಗಾಗಿ ಎಸ್ಐಟಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.


