ಎಲ್ಲಿ ನೋಡಿದ್ರು ರೇಶ್ಮಾ ಆಂಟಿಯ ವಿಡಿಯೋ … ಹಾಯ್ ಫ್ರೆಂಡ್ಸ್ ಅಂತ ರೀಲ್ಸ್ನಲ್ಲಿ ಕಾಣಿಸಿಕೊಳ್ಳೋ ರೀಲ್ಸ್ ರೇಶ್ಮ ಖ್ಯಾತಿಯ ರೀಲ್ಸ್ ಸ್ಟಾರ್ ,ರಿಯಲ್ ಲೈಫ್ ನಿಜಕ್ಕೂ ಕಣ್ಣೀರು ತರಿಸುತ್ತೆ.
ಕಡು ಬಡ ಕುಟುಂಬದಿಂದ ಬಂದ ರೀಲ್ಸ್ ರೇಶ್ಮಾ ಆರ್ಥಿಕವಾಗಿ ತೀರಾ ಹಿಂದುಳಿದಿದ್ದವರು ,80 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ರೇಶ್ಮಾ ದಿನಕ್ಕೆ ಮೂರ್ನಾಲ್ಕು ವಿಡಿಯೋ ಅಪ್ಲೋಡ್ ಮಾಡುತ್ತಾರೆ. ಕೆಲವೊಮ್ಮೆ ಜಾಸ್ತಿ ವಿಡಿಯೋ ಕೂಡ ಅಪ್ಲೋಡ್ ಆಗುತ್ತೆ . ಇನ್ನು ರೇಶ್ಮಾರ ರೀಲ್ಸ್ ವಿಡಿಯೋಗೆ ಅಸಹ್ಯ ಮತ್ತು ಅವಾಚ್ಯ ಕಾಮೆಂಟ್ಗಳೇ ಹೆಚ್ಚು ,ಟ್ರೋಲ್ ಮಾಡುವವರ ಬಗ್ಗೆ ಯೋಚನೆ ಮಾಡಿದ್ರೆ ಜೀವನ ಸಾಗಿಸೋಕೆ ಆಗುತ್ತಾ? ಅಂತಾರೆ ರೀಲ್ಸ್ ರೇಶ್ಮಾ. ರೇಶ್ಮಾ ರೀಲ್ಸಿಗೆ ನೆಗೆಟಿವ್ ಕಾಮೆಂಟ್ ಹಾಕುವವರು ಒಮ್ಮೆ ಆಕೆಯ ವ್ಯಥೆಯನ್ನ ಅರಿತುಕೊಳ್ಳುವುದು ಉತ್ತಮ.
ಬೆಳಗ್ಗೆ ಎದ್ದು ದಿನಚರಿ ಶುರು ಮಾಡುವ ಸಮಯದಿಂದ ಹಿಡಿದು ರಾತ್ರಿ ಮಲಗುವ ಸಮಯದವರೆಗೂ ವಿಡಿಯೋ ಮಾಡಿ ಹೇಗಿತ್ತು ನನ್ ವಿಡಿಯೋ ಎಂದು ಜನರರಿಂದ ಅಭಿಪ್ರಾಯವನ್ನು ಸಂಗ್ರಹಿಸುತ್ತಾರೆ ರೇಶ್ಮಾ .
ನನ್ನ ತಂದೆಗೆ ನನ್ ಗಂಡ ಹೊಡೆದೇ ಬಿಟ್ಟ ಅನ್ನೋ ರೇಷ್ಮಾ ವಿಡಿಯೋ ಸಖತ್ ವೈರಲ್ ಆಗಿತ್ತು ,ಇನ್ನೂ ಮುಸ್ಲಿಂ ಕುಟುಂಬದಿಂದ ಹುಟ್ಟಿದ ರೇಷ್ಮಾ ರೀಲ್ಸ್ ವಿಡಿಯೋ ಮಾಡುವ ಕಾರಣ ಬಹಿಷ್ಕಾರಕ್ಕೆ ಒಳಪಟ್ಟರು ,ಕುಟುಂಬಸ್ಥರೇ ಆಕೆಯನ್ನ ದೂರ ಇಟ್ಟರು, ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿರುವ ರೇಶ್ಮಾ ಮುಕ್ತವಾಗಿಯೇ ತನ್ನ ನೋವನ್ನ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ, ನನಗೂ ನನ್ನ ಕುಟುಂಬದ ಜೊತೆ ನಗು ನಗುತಾ ಇರೋದಕ್ಕೆ ಮನಸ್ಸಿದೆ ,ನನಗೀಗ ರೀಲ್ಸ್ ಮಾಡುವುದರಿಂದ ಕೈ ತುಂಬಾ ಹಣ ಬರುತ್ತಿದೆ ,ಹಣದ ಕೊರತೆ ನನಗಿಲ್ಲ,ನನ್ನ ಕುಟುಂಬ ನನ್ನೊಂದಿಗೆ ಆಸಕ್ತಿ ತೋರಿಸಿದರೆ ಸಾಕು ಎಂದು ಗೋಗರೆದು ಮಾಡಿದ್ದ ವಿಡಿಯೋ ಕೇಳುಗರ ಕಣ್ಣಂಚಲ್ಲಿ ನೀರು ಬರಿಸಿದ್ದು ಸುಳ್ಳಲ್ಲ.
ಒಟ್ಟಾರೆ ಟ್ರೆಂಡ್ ಲೇಡಿ ರೀಲ್ಸ್ ಸ್ಟಾರ್ ರೇಷ್ಮಾ ತನ್ನ ಸ್ವಂತ ಪ್ರತಿಭೆಯಿಂದ ಕನ್ನಡಿಗರ ಮನ ಗೆದ್ದಿರುವ ರೇಷ್ಮಾ ಬದುಕಲ್ಲಿ ಬಿರುಗಾಳಿ ಎದ್ದಿರುವುದು ವಿಪರ್ಯಾಸವೇ ಸರಿ.