Tuesday, January 27, 2026
24 C
Bengaluru
Google search engine
LIVE
ಮನೆಕ್ರಿಕೆಟ್ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ : ಚಿನ್ನ ಗೆದ್ದ ಭಾರತೀಯ ಮಹಿಳೆಯರು

ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ : ಚಿನ್ನ ಗೆದ್ದ ಭಾರತೀಯ ಮಹಿಳೆಯರು

ಬ್ಯಾಡ್ಮಿಂಟನ್ ಏಷ್ಯಾ ಟೀಂ ಚಾಂಪಿಯನ್‌ಶಿಪ್‌ನ ರೋಚಕ ಫೈನಲ್‌ನಲ್ಲಿ ಭಾರತೀಯ ಮಹಿಳೆಯರು ಥಾಯ್ಲೆಂಡ್ ಅನ್ನು 3-2 ಗೋಲುಗಳಿಂದ ಮಣಿಸಿ ಚೊಚ್ಚಲ ಚಿನ್ನದ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಪಿವಿ ಸಿಂಧು ನೇತೃತ್ವದ ಭಾರತ ಮಹಿಳಾ ತಂಡ ಎಲ್ಲ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಉತ್ತಮ ಪ್ರದರ್ಶನ ಮುಂದುವರಿಸಿ ಎರಡು ಬಾರಿ ಕಂಚಿನ ಪದಕ ಗೆದ್ದ ಥಾಯ್ಲೆಂಡ್ ತಂಡವನ್ನು ಸೋಲಿಸಿದೆ. ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಮಹಿಳೆಯರಿಗೆ ಇದು ಮೊದಲ ಪ್ರಮುಖ ಪ್ರಶಸ್ತಿಯಾಗಿದೆ. ಈ ಗೆಲುವು ಏಪ್ರಿಲ್ 28 ರಿಂದ ಮೇ 5 ರವರೆಗೆ ಚೀನಾದ ಚೆಂಗ್ಡುದಲ್ಲಿ ನಡೆಯಲಿರುವ ಉಬರ್ ಕಪ್‌ಗೆ ಅವರ ನೈತಿಕ ಮನೋಬಲವನ್ನು ಹೆಚ್ಚಿಸುತ್ತದೆ.

ಈ ಸ್ಪರ್ಧೆಯಲ್ಲಿ ಭಾರತ ಈ ಹಿಂದೆ ಎರಡು ಪದಕಗಳನ್ನು ಗೆದ್ದಿತ್ತು. ಭಾರತ ಪುರುಷರ ತಂಡ 2016 ಮತ್ತು 2020ರಲ್ಲಿ ಕಂಚಿನ ಪದಕ ಗೆದ್ದಿತ್ತು. ಭಾರತದ ಮಾಜಿ ಕೋಚ್ ವಿಮಲ್ ಕುಮಾರ್ ಪಿಟಿಐಗೆ ಪ್ರತಿಕ್ರಿಯಿಸಿದ್ದು, ‘ಭಾರತೀಯ ಬ್ಯಾಡ್ಮಿಂಟನ್‌ಗೆ ಇದು ಸ್ಮರಣೀಯ ಕ್ಷಣವಾಗಿದೆ. ಇದರ ಶ್ರೇಯಸ್ಸು ಯುವ ಆಟಗಾರರಿಗೆ ಸಲ್ಲುತ್ತದೆ. ಅವರು ಗೆಲ್ಲುವ ಉತ್ಸಾಹವನ್ನು ತೋರಿಸಿದ್ದು ಪರಸ್ಪರ ಬೆಂಬಲಿಸಿದರು. ಭಾರತದ ಥಾಮಸ್ ಕಪ್ ಗೆಲುವಿನ ವೇಳೆಯ ವಾತಾವರಣವೇ ಇತ್ತು. ಆದ್ದರಿಂದ ಇದು ಭಾರತಕ್ಕೆ ವಿಶೇಷ ಕ್ಷಣವಾಗಿದೆ ಎಂದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments