ಚಿಕ್ಕೋಡಿ : ಬೆಲ್ಲ ಉತ್ಪಾದನೆ, ಎಥೆನಾಲ್ ಉದ್ಯಮಿ ಅಶೋಕ ಅಸ್ಕಿಗೆ ಕಿರುಕುಳ ಹಿನ್ನೆಲೆ ಅಳಗವಾಡಿ ಗ್ರಾಮದ ಕಾರ್ಖಾನೆಯಲ್ಲಿ ಸಚಿವರ ವಿರುದ್ಧ ಸಾವಿರಾರು ರೈತರ ಆಕ್ರೋಶ ವ್ಯಕ್ತಪಡಿಸಿದ್ರು. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಳಗವಾಡಿಯಲ್ಲಿ ಘಟನೆ ನಡೆದಿದೆ.
ಸಕ್ಕರೇ ಆಯುಕ್ತರೇ ನಮ್ಮ ಮೇಲಿನ ದಬ್ಬಾಳಿಕೆ ಹಾಗೂ ಎಸ್.ಎಸ್ ಮಲ್ಲಿಕಾರ್ಜುನರವರ ದಬ್ಬಾಳಿಕೆ ಇಲ್ಲಿಗೆ ನಿಲ್ಲಲಿ. ಪ್ರಾಣ ಬಿಟ್ಟೇವು ಕಾರ್ಖಾನೆ ಬಿಡೆವು ಎಂಬ ಭಾವಚಿತ್ರ ಪ್ರದರ್ಶಿಸಿ ಸಾವಿರಾರು ರೈತರು ಪ್ರತಿಭಟನೆ ನಡೆಸಿದರು.
ರಾಯಬಾಗ ತಹಶೀಲ್ದಾರ ಮೂಲಕ ಸಿಎಂಗೆ ಬ್ರಹಾನಂದ ಸಾಗರ ಜಾಗರ ಇಂಡಸ್ಟ್ರಿ ಎಂಡಿ ಅಶೋಕ ಆಸ್ಕಿ ಮನವಿ ಸಲ್ಲಿಸಿದ್ರು. ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಗುವುದೆಂದು ರಾಯಬಾಗ ತಹಶೀಲ್ದಾರ ಪ್ರಶಾಂತ ಚನ್ನಗೌಡರ ಭರವಸೆ ನೀಡಿದರು.