Wednesday, January 28, 2026
20.2 C
Bengaluru
Google search engine
LIVE
ಮನೆ#Exclusive NewsTop Newsಪತ್ನಿಯಿಂದ ಕರಿಮಣಿ ರೀಲ್ಸ್, ಒರಿಜಿನಲ್ ಗಂಡ ಆತ್ಮಹತ್ಯೆ | ಬ್ಯಾನ್ ಆಗುತ್ತಾ ಕರಿಮಣಿ ಮಾಲೀಕ ರೀಲ್ಸ್.?

ಪತ್ನಿಯಿಂದ ಕರಿಮಣಿ ರೀಲ್ಸ್, ಒರಿಜಿನಲ್ ಗಂಡ ಆತ್ಮಹತ್ಯೆ | ಬ್ಯಾನ್ ಆಗುತ್ತಾ ಕರಿಮಣಿ ಮಾಲೀಕ ರೀಲ್ಸ್.?

Chamarajanagara : ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿರುವ ರೀಲ್ಸ್ ಅಂದ್ರೆ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡು. ಹಳೆಯ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿ, ಯಾರೂ ನೋಡಿದರೂ ಇದೇ ರೀಲ್ಸ್ ಮಾಡುತ್ತಿದ್ದಾರೆ. ಆದರೆ ಈ ರೀಲ್ಸ್‌ನಿಂದ ಓರಿಜಿನಲ್ ಗಂಡ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಚಾಮರಾಜನಗರದ ಹನೂರು ತಾಲೂಕಿನ ಪಿ.ಜಿ.ಪಾಳ್ಯದಲ್ಲಿ ಈ ಘಟನೆ ನಡೆದಿದ್ದು, 33 ವರ್ಷದ ಕುಮಾರ್ ಎಂಬುವವರ ಪತ್ನಿ, ತನ್ನ ಸಹೋದರಿ ಮತ್ತು ಸೋದರಮಾವನ ಮಗನೊಂದಿಗೆ, ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಳು. ಇದಕ್ಕೆ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆ ತಾರಕಕ್ಕೆ ಹೋಗಿ, ಪತಿ ಮನನೊಂದು ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇನ್ನು ರೀಲ್ಸ್ ಮಾಡಿದ್ದಕ್ಕೆ ಕೋಪ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹಿಂದೆ ಹಲವು ವಿಚಾರಗಳಿವೆ. ಕುಮಾರ್ ಪತ್ನಿ ರೀಲ್ಸ್ ಮಾಡಿ, ಸುಮ್ಮನೆ ಉಳಿದಿರಲಿಲ್ಲ. ಬದಲಾಗಿ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಳು. ಹಾಗಾಗಿ ಇದನ್ನು ನೋಡಿದ್ದ ಕುಮಾರ್ ಸ್ನೇಹಿತರು ಮತ್ತು ಕುಟುಂಬಸ್ಥರು ಕುಮಾರ್‌ನನ್ನು ರೇಗಿಸಿದ್ದರು. ಕೆಲವರು ಇದನ್ನು ಪ್ರಶ್ನಿಸಿದ್ರೆ, ಕೆಲವರು ವ್ಯಂಗ್ಯ ಮಾಡಿದ್ದರು. ಇದರಿಂದ ಬೇಸರಗೊಂಡಿದ್ದ ಕುಮಾರ್ ಪತ್ನಿ ಜೊತೆ ಜಗಳವಾಡಿ, ಕೊನೆಗೆ ಮನನೊಂದು ನೇಣಿಗೆ ಶರಣಾಗಿದ್ದಾನೆ.ಘಟನೆ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಕರಿಮಣಿ ಮಾಲೀಕ ನೀನಲ್ಲ ಹಾಡನ್ನ ಬ್ಯಾನ್ ಮಾಡಬೇಕು ಅಂತ ಒತ್ತಾಯವೂ ಕೇಳಿ ಬರ್ತಿದೆ..

 

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments